Book Circle

Book Circle Book Shop

ಕಾವ್ಯ ಪ್ರಿಯರಿಗಾಗಿ ಎರಡು ಬ್ಯೂಟಿಫುಲ್ ಕವನ ಸಂಕಲನಗಳು ಇಂದಿನಿಂದ ಲಭ್ಯ1. ಸವಿರಾಜ್ ಆನಂದೂರು : ಗಂಡಸರನ್ನು ಕೊಲ್ಲಿರಿ : ₹130/-2. ಎಂ.ಆರ್.‌ ...
12/09/2026

ಕಾವ್ಯ ಪ್ರಿಯರಿಗಾಗಿ ಎರಡು ಬ್ಯೂಟಿಫುಲ್ ಕವನ ಸಂಕಲನಗಳು ಇಂದಿನಿಂದ ಲಭ್ಯ

1. ಸವಿರಾಜ್ ಆನಂದೂರು : ಗಂಡಸರನ್ನು ಕೊಲ್ಲಿರಿ : ₹130/-
2. ಎಂ.ಆರ್.‌ ಕಮಲ : ಕಾಡು ಅಂಜೂರದ ಹುಡುಗಿ : ₹ 120/-

ಎರಡೂ ಪುಸ್ತಕಗಳ ಒಟ್ಟು ಬೆಲೆ : ₹ 250/-
ವಿಶೇಷ ರಿಯಾಯಿತಿಯಲ್ಲಿ ₹ 210/- ಕ್ಕೆ
ಶಿಪ್ಪಿಂಗ್ : ಪ್ರತ್ಯೇಕ
ಸಂಪರ್ಕಿಸಿ : 099806 33644

ಮಾತಾಡುವ ದೇವರುತೆಲುಗು ಮೂಲ : ಸಲೀಂ(ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು)ಕನ್ನಡಾನುವಾದ:ಧನಪಾಲ ನಾಗರಾಜಪ್ಪಬೆಲೆ            : 3...
12/09/2026

ಮಾತಾಡುವ ದೇವರು

ತೆಲುಗು ಮೂಲ : ಸಲೀಂ
(ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು)

ಕನ್ನಡಾನುವಾದ:
ಧನಪಾಲ ನಾಗರಾಜಪ್ಪ

ಬೆಲೆ : 390/-
ರಿಯಾಯಿತಿ : 10%
ಶಿಪ್ಪಿಂಗ್ : ಪ್ರತ್ಯೇಕ
ಸಂಪರ್ಕಿಸಿ : 099806 33644

ನನಗೆ ಸಾಂಪ್ರದಾಯಿಕ ಕ್ರಿಯಾಕರ್ಮಗಳನ್ನು ಮಾಡುವ ಅವಶ್ಯಕತೆಯಿಲ್ಲ. ಅವುಗಳಲ್ಲಿ ನನಗೆ ನಂಬಿಕೆಯಿಲ್ಲ. ನಾನು ಬದುಕಿನುದ್ದಕ್ಕೂ ಜನರಿಗೆ ಸಾಧ್ಯವಾದಷ್ಟು ಸಹಾಯ ಮಾಡಿದ್ದೇನೆಂಬ ತೃಪ್ತಿ ನನಗಿದೆ. ಉಪಾಧ್ಯಾಯನಾಗಿ ಎಷ್ಟೋ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿರುವೆ. ನಾನು ಸತ್ತ ಮೇಲೂ ನನ್ನ ಶರೀರ ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಉಪಯೋಗವಾಗುವುದಕ್ಕಿಂತ ಬೇರೇನು ಬೇಕು? ಉಪಾಧ್ಯಾಯನಾಗಿ ನನ್ನ ಜೀವನ ಸಾರ್ಥಕವೆಂದು ತಿಳಿಯುವೆ. ನಿರ್ಧಾರದಲ್ಲಿ ಬದಲಾವಣೆಯೇ ಇಲ್ಲ.

(ಕತೆ : ಸದ್ಗತಿ)

ಇಬ್ರಾಹೀಮ್ ನನ್ನ ಗಂಡ. ಇದು ಅಲ್ಲಾನ ನಿರ್ಣಯ. ಅದನ್ನು ಬದಲಿಸುವ ಅಧಿಕಾರ ಈ ಮುಲ್ಲಾಗಳಿಗೆ, ಇಮಾಮ್‌ಗಳಿಗೆ ಯಾರು ಕೊಟ್ಟರು? ಷರಿಯತ್ತನ್ನು ತಮಗೆ ಇಷ್ಟ ಬಂದಂತೆ ವಕ್ರೀಕರಿಸಿ ನನ್ನ ಬದುಕಿನೊಂದಿಗೆ ಚದುರಂಗವಾಡುತ್ತಿದ್ದರೆ ನಾನು ಕೈಕಟ್ಟಿಕೊಂಡು ಕೂರುವುದಿಲ್ಲ. ನಾನು ವಿಧೇಯಳಾಗಿರಬೇಕಿರುವುದು ಅಲ್ಲಾನಿಗೆ; ಮಾನವತ್ವ ಇರದ ಈ ಮೃಗಗಳಿಗಲ್ಲ.

(ಕತೆ : ತಲಾಕ್... ತಲಾಕ್... ತಲಾಕ್...)

ನನ್ನ ತಂಗಿಯ ಬದುಕಿನ ಬೆಲೆ ಐನೂರು ರೂಪಾಯಿಗಳು! ಅವಳ ಸಂಸಾರದ ಬೆಲೆ ಕೇವಲ ಐನೂರು ರೂಪಾಯಿಗಳು! ಅಂಗೈ ಅಗಲದ ಆಕೆಯ ಕಣ್ಣಗಳಲ್ಲಿನ ಕಾಂತಿಯ ಬೆಲೆ ಬರೀ ಐನೂರು ರೂಪಾಯಿಗಳು! ನಾನು ಮನೆಯಿಂದ ಹೊರಟಾಗ ಅವಳ ಕಣ್ಣುಗಳಲ್ಲಿ ಏನಿತ್ತು? ಅಸಹ್ಯವೆ? ಆವೇದನೆಯೆ? ಅಸಹಾಯಕತೆಯೆ? ಅವಮಾನವೆ? ಅನುಮಾನವೆ? ಏನು...?

(ಕತೆ : ಸುಳಿಗೆ)

ಹೊಯ್ಸಳ ವಿಷ್ಣುವರ್ಧನಐತಿಹಾಸಿಕ ಕಾದಂಬರಿಲೇಖಕರು    : ಪ್ರಕಾಶ್ ಹೇಮಾವತಿಮುಖಬೆಲೆ   : 250/-ರಿಯಾಯಿತಿ : 10%ಶಿಪ್ಪಿಂಗ್      : ಪ್ರತ್ಯೇಕಸಂಪ...
11/09/2026

ಹೊಯ್ಸಳ ವಿಷ್ಣುವರ್ಧನ
ಐತಿಹಾಸಿಕ ಕಾದಂಬರಿ

ಲೇಖಕರು : ಪ್ರಕಾಶ್ ಹೇಮಾವತಿ
ಮುಖಬೆಲೆ : 250/-
ರಿಯಾಯಿತಿ : 10%
ಶಿಪ್ಪಿಂಗ್ : ಪ್ರತ್ಯೇಕ
ಸಂಪರ್ಕಿಸಿ : 099806 33644

ಕರ್ನಾಟಕದ ಚರಿತ್ರೆಯಲ್ಲಿ ಹೊಯ್ಸಳರಿಗೆ ಒಂದು ವಿಶಿಷ್ಟವಾದ ಸ್ಥಾನವಿದೆ. ಇವರು ನಿರ್ಮಿಸಿದ ಅಸಂಖ್ಯಾತ ಶಿಲ್ಪ ವೈಭವಗಳಿಂದ ವಿಜೃಂಭಿಸುತ್ತಿರುವ ದೇವಾಲಯಗಳು ಇಂದಿಗೂ ಸಹಸ್ರಾರು ಜನರನ್ನು ಆಕರ್ಷಿಸುತ್ತಿರುವುದು ಇವರ ಜನಪ್ರಿಯತೆಗೆ ಮುಖ್ಯ ಕಾರಣವಾಗಿದೆ. ಆದರೆ ಈ ಜನಪ್ರಿಯತೆಯಲ್ಲಿ ಇವರ ಇನ್ನೊಂದು ಬಹುಮುಖ್ಯವಾದ ಕೊಡುಗೆ ಅಥವಾ ಕನ್ನಡನಾಡಿಗೆ ಇವರು ಸಲ್ಲಿಸಿರುವ ಇನ್ನೊಂದು ಅಮೋಘ ಸೇವೆ ಮರೆಯಾಗಿದೆ. ಹೊಯ್ಸಳರು ಅಧಿಕಾರಕ್ಕೆ ಬಂದದ್ದು ಕನ್ನಡ ನಾಡಿನ ಒಂದು ಸಂದಿಗ್ಧ ಕಾಲದಲ್ಲಿ ಎಂದು ಹೇಳಬಹುದು. ಸುಮಾರು ಆರೇಳು ಶತಮಾನಗಳಷ್ಟು ಕಾಲ ಮೂಡಣ ಹಾಗೂ ತೆಂಕಣ ದಿಕ್ಕುಗಳಿಂದ ಕನ್ನಡನಾಡಿನ ಮೇಲೆ ಸತತವಾಗಿ ದಾಳಿ ಮಾಡುತ್ತಿದ್ದ ತಮಿಳು ರಾಜರನ್ನು ಯಶಸ್ವಿಯಾಗಿ ತಡೆಗಟ್ಟಿದ್ದ ತಲಕಾಡಿನ ಗಂಗರು ಸುಮಾರು ಹತ್ತನೇ ಶತಮಾನದಲ್ಲಿ ದುರ್ಬಲರಾಗುತ್ತಿದ್ದರು. ಆಗ ಚೋಳರು ತಲಕಾಡನ್ನು ವಶಪಡಿಸಿಕೊಂಡು ಕನ್ನಡನಾಡಿನ ಇತರ ಪ್ರದೇಶಗಳನ್ನು ಅತಿಕ್ರಮಿಸಲು ಯೋಜಿಸುತ್ತಿದ್ದರು. ಆಂತಹ ಸಮಯದಲ್ಲಿ ಅಧಿಕಾರಕ್ಕೆ ಬಂದ ಹೊಯ್ಸಳರು, ಚೋಳರು ಕನ್ನಡನಾಡಿನ ಇನ್ನೂ ಒಳಪ್ರದೇಶಕ್ಕೆ ಬರದಂತೆ ತಡೆದರು. ಆ ಸಮಯದಲ್ಲಿ ಅತ್ಯಂತ ಪ್ರಬಲರಾಗಿದ್ದ ತಮಿಳಿನ ಚೋಳರನ್ನು ಎದುರು ಹಾಕಿಕೊಳ್ಳುವ ಪ್ರಮೇಯ ಹೊಯ್ಸಳರಿಗಿರಲಿಲ್ಲ. ಅವರ ಸರ್ವಾಧಿಕಾರವನ್ನು ಒಪ್ಪಿಕೊಂಡು, ಅವರಿಗೆ ಸಾಮಂತರಾಗಿ ನಿಶ್ಚಿಂತೆಯಿಂದ ತಮ್ಮ ರಾಜ್ಯವನ್ನು ಆಳುತ್ತಾ ಇರಬಹುದಾಗಿತ್ತು. ಆದರೆ ಹೊಯ್ಸಳರ ಕನ್ನಡಾಭಿಮಾನ ಹಾಗೆ ಆಗಗೊಡಲಿಲ್ಲ.

ಅಳಿದುಳಿದಿದ್ದ ಗಂಗರನ್ನು ಮತ್ತು ಕದಂಬರನ್ನು ಒಂದುಗೂಡಿಸಿಕೊಂಡು ಚೋಳರ ವಿರುದ್ಧ ಹೋರಾಡಿ, ಅಂತಿಮವಾಗಿ ಚೋಳರನ್ನು ಕನ್ನಡನಾಡಿನಿಂದ ಹೊರದೂಡಿದರು.

ಸುಮಾರು ಮೂರು ಶತಮಾನಗಳಷ್ಟು ಕಾಲ ಕನ್ನಡನಾಡಿಗೆ ಸುರಕ್ಷತೆ ಹಾಗೂ ಸುಭದ್ರ ಆಡಳಿತ ಒದಗಿಸಿ ಮುಂದೆ ವಿಜಯನಗರ ಸಾಮ್ರಾಜ್ಯಕ್ಕೆ ಸ್ಪೂರ್ತಿಯಾದರು. ಹೊಯ್ಸಳರ ಈ ಕನ್ನಡನಾಡಿನ ಸೇವೆ ಸಮಸ್ತ ಕನ್ನಡಿಗರು ಹೆಮ್ಮೆಯಿಂದ ನೆನಪಿಸಿಕೊಳ್ಳುವಂತಹದು.

ಉಳ್ಳವರ ಶಿವಾಲಯ ದೇಹ ದೇಗುಲ(ಬಸವಣ್ಣನವರ ಒಂದು ವಚನ ಕುರಿತು)ಲೇಖಕರು    : ಮೃತ್ಯುಂಜಯ ರುಮಾಲೆಮುಖಬೆಲೆ   : 650/-ರಿಯಾಯಿತಿ : 10%ಶಿಪ್ಪಿಂಗ್  ...
11/09/2026

ಉಳ್ಳವರ ಶಿವಾಲಯ ದೇಹ ದೇಗುಲ
(ಬಸವಣ್ಣನವರ ಒಂದು ವಚನ ಕುರಿತು)

ಲೇಖಕರು : ಮೃತ್ಯುಂಜಯ ರುಮಾಲೆ
ಮುಖಬೆಲೆ : 650/-
ರಿಯಾಯಿತಿ : 10%
ಶಿಪ್ಪಿಂಗ್ : ಪ್ರತ್ಯೇಕ
ಸಂಪರ್ಕಿಸಿ : 099806 33644

ಉಳ್ಳವರ ಶಿವಾಲಯದಲ್ಲಿರುವ ಮೂರ್ತಿ, ದೇವರ ಮೂರ್ತರೂಪ. ಕಾಲಾಂತರದಲ್ಲಿ ಶಿವಾಲಯವೂ ಮೂರ್ತಿಯೂ ನಾಶವಾಗಿ ಮೂರ್ತರೂಪದ ದೇವರೂ ಇಲ್ಲವಾಗಬಹುದು.

ಸ್ಥಿತಿಗೆ ಆದರೆ, ಅಂತರಂಗದ 'ಅರಿವು' ದೈವರೂಪಿಯಾದಾಗ: ದೇಹವೇ ದೇಗುಲವಾಗುವುದು. ದೈವ ಅಮೂರ್ತರೂಪ ಕಾಲಾಂತರದಲ್ಲಿ ದೇಹ ನಾಶವಾದರೂ ದೈವದ ಆ ಅಮೂರ್ತಭಾವ ನಾಶವಾಗದು. ಅದು ಅಮೂರ್ತದಿಂದ ಮತ್ತೊಂದು ಅಮೂರ್ತ ಮುಂದುವರೆಯುತ್ತದೆ. ಈ ಪರಿಭಾವನೆಯನ್ನು ಅಂತರಂಗಕ್ಕೆ ಆವಾಹಿಸಿಕೊಳ್ಳುವುದರ ಮೂಲಕ ದೇಹ ದೇಗುಲವಾಗಬೇಕು. ಅಂಗವು ಪ್ರಾಣಲಿಂಗ ಸಂಬಂಧ ಪಡೆದು ಪ್ರಾಣಲಿಂಗಿಯೇ ಆಗಬೇಕು : ಪ್ರಾಣಲಿಂಗಿ ಪ್ರಾಣಲಿಂಗದೊಂದಿಗೆ ಅನುಸಂಧಾನವಾಗಬೇಕು. ಆಗ ಅಳಿವಿಲ್ಲದ ಅಮೂರ್ತವಾದ ಅರಿವಿನ ದೈವರೂಪದ ಜಂಗಮತ್ವವು ಒಂದು ಪ್ರಜ್ಞೆಯಾಗಿ ನಿರಂತರವೂ ಶಾಶ್ವತವೂ ಆಗುತ್ತದೆ. ಮೂರ್ತಕ್ಕೆ ನಾಶವುಂಟು, ಅಮೂರ್ತ ನಾಶವಾಗದು. ಹೀಗಾಗಿ ಸ್ಥಾವರ ಶಿವಾಲಯಕ್ಕೆ, ಮೂರ್ತಿಗೆ ಅಳಿವುಂಟಾಗಬಹುದು; ಜಂಗಮತ್ವ ಪ್ರಾಪ್ತವಾದ ದೇಹದೇಗುಲದ ಪರಿಭಾವನೆಗೆ, ದೈವಕ್ಕೆ ಅಳಿವಿಲ್ಲ.

ಅಂಗಷಟ್‌ಸ್ಥಲ ಪ್ರಾಧಾನ್ಯದ ಬಸವಣ್ಣನವರ 'ಉಳ್ಳವರು...' ವಚನ ಮತ್ತು ಅಂಗ ಷಟ್‌ಸ್ಥಲ ಪ್ರಾಧಾನ್ಯದ ಚೆನ್ನಬಸವಣ್ಣನವರ 'ಉಳ್ಳವರು...' ವಚನ ಸಹಜವಾಗಿ ಉಪಾಸಕ ಘಟಕ ಪ್ರಾಧಾನ್ಯದ ಮತ್ತು ಉಪಾಸ್ಯ ಘಟಕ ಪ್ರಾಧಾನ್ಯದ ಮಹತ್ವವನ್ನು ಉಚಿತವಾಗಿ ಪ್ರತಿಪಾದಿಸುತ್ತವೆ. ಕ್ರಮಸಮುಚ್ಚಯದಲ್ಲಿ ಷಟ್‌ಸ್ಥಲವನ್ನು ಗ್ರಹಿಸುವ ಬಸವಣ್ಣನವರು ಸಮಸಮುಚ್ಚಯದಲ್ಲಿ ಷಟ್ಸ್ಥಲವನ್ನು ಗ್ರಹಿಸಿದ ಚೆನ್ನಬಸವಣ್ಣನವರ ಸೃಜನಶೀಲತೆಯನ್ನು, ಪ್ರಯೋಗಶೀಲತೆಯನ್ನು ತನ್ನೊಳಗಿನ ಪ್ರಾಣಲಿಂಗವನ್ನು, ಪ್ರಾಣಲಿಂಗಿಯಾಗಿ ಅನುಸಂಧಾನ ಮಾಡಿಕೊಂಡ 'ಪರಿಣಾಮ'ವೇ 'ಉಳ್ಳವರು...' ಎಂಬ ಸಾಧಿತ ಉಕ್ತಿಯಾಗಿ ಪ್ರಕಟಗೊಂಡಿದೆ. ಬಹುಶಃ ಅನುಭಾವಿಕ ಪರಂಪರೆಯ ಅಲ್ಲಮನ ಸಾಧನೆಗಿಂತಲೂ ತಾತ್ವಿಕ-ಧಾರ್ಮಿಕ ಪರಂಪರೆಯ ಚೆನ್ನಬಸವಣ್ಣನವರ ಸಾಧನೆಗಿಂತಲೂ ಸಮಷ್ಟಿ ಪ್ರಜ್ಞೆಯ ಮೂಲಕ ಒಂದು ಯುಗವನ್ನು (ಅಲ್ಲಮ ಬಸವಣ್ಣನವರನ್ನು ಯುಗದ ಉತ್ಸಾಹ-ಎಂದಿರುವುದನ್ನು ಇಲ್ಲಿ ಗಮನಿಸಬೇಕು) ತನ್ನೆಡೆಗೆ ತಂದುಕೊಂಡ ಬಸವಣ್ಣನವರ ಈ ಸಾಧನೆ ವೈಶಿಷ್ಟ್ಯಪೂರ್ಣವಾಗಿದೆ.

ಅರುಂಧತಿ ರಾಯ್ ಅವರು Mother Mary Comes To Me ಈಗ ಕನ್ನಡದಲ್ಲಿ...ಮದರ್ ಮೇರಿ.. ನನ್ನ ಅಮ್ಮ : ನನ್ನ ಗ್ಯಾಂಗ್‌ಸ್ಟರ್ಅನುವಾದ   : ಪದ್ಮನಾಭ ಭ...
09/09/2026

ಅರುಂಧತಿ ರಾಯ್ ಅವರು Mother Mary Comes To Me ಈಗ ಕನ್ನಡದಲ್ಲಿ...

ಮದರ್ ಮೇರಿ.. ನನ್ನ ಅಮ್ಮ : ನನ್ನ ಗ್ಯಾಂಗ್‌ಸ್ಟರ್

ಅನುವಾದ : ಪದ್ಮನಾಭ ಭಟ್ ಶೇವ್ಕಾರ
ಮುಖೆಬೆಲೆ : 480/-
ರಿಯಾಯಿತಿ : 10%
ಶಿಪ್ಪಿಂಗ್ : ಪ್ರತ್ಯೇಕ
ಸಂಪರ್ಕಿಸಿ : 099806 33644

'ನನ್ನ ಅಮ್ಮ; ನನ್ನ ಗ್ಯಾಂಗ್‌ಸ್ಟರ್ ಈ ಪುಟಗಳಲ್ಲಿದ್ದಾಳೆ. ನನ್ನ ಪಾಲಿಗೆ ಅವಳು ಬಿಡಾರವೂ ಆಗಿದ್ದಳು; ಬಿರುಗಾಳಿತೂ.'

#ಅರುಂಧತಿರಾಯ್

ಹಸಿರು ಟಾವೆಲ್ರೈತನೊಬ್ಬನ ಜೀವನ ಕಥನಲೇಖಕರು    : ಟಿ.ಎಸ್. ಗೊರವರಮುಖಬೆಲೆ   : 120/-ರಿಯಾಯಿತಿ : 10%ಶಿಪ್ಪಿಂಗ್      : ಪ್ರತ್ಯೇಕಸಂಪರ್ಕಿಸಿ...
08/09/2026

ಹಸಿರು ಟಾವೆಲ್
ರೈತನೊಬ್ಬನ ಜೀವನ ಕಥನ

ಲೇಖಕರು : ಟಿ.ಎಸ್. ಗೊರವರ
ಮುಖಬೆಲೆ : 120/-
ರಿಯಾಯಿತಿ : 10%
ಶಿಪ್ಪಿಂಗ್ : ಪ್ರತ್ಯೇಕ
ಸಂಪರ್ಕಿಸಿ : 099806 33644

ಕಣ್ಣುಟ್ಟುವತನಕ ಹರಡಿರುವ ಕಸುವುಳ್ಳ ಕಪ್ಪುಮಣ್ಣಿನ ಹೊಲ. ತನಗೆ ತಿಳಿದಾಗ ಬಂದು ಸುರಿದು ಹೋಗುವ ಮಳೆ. ಒಂದಕ್ಕೊಂದು ಜತ್ತು ತಪ್ಪಿದ ಒಗೆತನ. ಆದರೂ ಒಕ್ಕಿದ್ದಕ್ಕೆ ಕಣ ತುಂಬುವ ನೆಲದ ತಾಯ್ತನ, ರೋಣ, ಗಜೇಂದ್ರಗಡ, ನರಗುಂದ, ನವಲಗುಂದದ ಚೌಕಿಯ ಬಾಳೇವು ಇದು. ದಾಂಪತ್ಯವಿರಸದ ಮಕ್ಕಳಂತೆ ಉದ್ವೇಗದ ಏರುಗಚ್ಚಿನಲ್ಲಿರುವ ಜನ. ದುಡಿಮೆ-ವಿರಾಮ, ಪ್ರೀತಿ-ಜಗಳ, ಬಾಂಧವ್ಯ-ದ್ವೇಷ, ಕೂಡುಣ್ಣುವ-ಕೂಡಿ ಕಾದುವ ಎಲ್ಲದರಲ್ಲೂ ಪುಟ್ಟಪೂರಾ ಅನುಭವಿಸಿಯೇನೆಂಬ ತಾದ್ಯಾತ್ಮ, ಜಮೀನ್ದಾರಿಕೆಯ ಅಹಮಿಕೆಯನ್ನೇ ಅಲಕ್ಷ್ಯ ಮಾಡಿ ಎಲ್ಲರೊಳಗೊಂದಾಗಿ ಬಾಳೇವು ಮಾಡಬೇಕೆಂಬ ಜೀವನ ವಿವೇಕವನ್ನು ಕಟ್ಟಿಕೊಂಡವರು. ಕಾಡಿನ ಹಸಿರಿಲ್ಲ ಎಂದು ಕೊರಗದೆ, ಸುರೇಪಾನದ ಹಳದಿ ದಿಬ್ಬಣ ನಿಲಿಸಿ, ಸೌಖ್ಯದ ಪದರರೂಪೀ ಸಂರಚನೆಯನ್ನು ನಿರೂಪಿಸಿದ ಜನ. ಬಯಲುಸೀಮೆಯ ಜನಬದುಕಿನ ಕಥನವನ್ನು ಈ ಜೀವನ ವೃತ್ತಾಂತ ನೆನಪಿಸುತ್ತದೆ.

ಇದು, ಕೂಡ್ಲೆಪ್ಪ ಎಂಬ ಅಬೋಧ ಹುಡುಗ ತನ್ನ ಅನಾಥ ಪ್ರಜ್ಞೆಯೊಂದಿಗೆ ಗುದಮುರಿಗಿ ಹಾಕುತ್ತಲೇ ಬಾಳನ್ನು ಕಟ್ಟಿಕೊಂಡ ಕವಿತೆ. ಬಿರುಬಿಗಿದ ಮಣ್ಣ ಪದರದಿಂದ ಎಳೆಹುಲ್ಲಿನ ದಳಗಳು ತಲೆಯೆತ್ತುವ ಕಥೆ. ಈ ದೇಶದ ಸಾಮಾನ್ಯಾತಿ ಸಾಮಾನ್ಯನ ಬಾಳಸಂಪುಟ. ಲಿಂಗ ಜಾತಿ ಕುಲ ಕಷ್ಟಗಳಿಂದಲೂ 'ವಿಶಿಷ್ಟ' ಎಂದು ಗುರುತಿಸಿಕೊಳ್ಳಲು ಆಗದವನ ಚರಿತ್ರೆ, ಮನುಷ್ಯ ಬಾಳು ವಿಶಿಷ್ಟವಾಗುವುದು ಅವನದನ್ನು ನಿರ್ವಹಿಸುವ ಬಗೆಯಲ್ಲಿ ಎಂದು ತಿಳಿಸುವ ಟಿಪ್ಪಣಿ. ವ್ಯಕ್ತಿಕಥೆಯೊಂದಿಗೆ ಸಮುದಾಯ ಕಥೆಯನ್ನು ಬೆರೆಸಿದ ಲಾವಣಿ.

ಕಾರ್ಲೈಲ್ ಹೇಳುತ್ತಾನೆ - ಚರಿತ್ರೆಯೆಂದರೆ ಮತ್ತೇನೂ ಅಲ್ಲ, ಅಸಂಖ್ಯ ಜೀವನ ಚರಿತ್ರೆಗಳ ಸಾರಾಂಶ, ಹೌದಲ್ಲವೇ? ಚರಿತ್ರೆಯನ್ನು ಹೀಗೆ ತಿದ್ದಿಕೊಳ್ಳುವ ಅಗತ್ಯವಿದೆ. ಜೀವನ ಚರಿತ್ರೆ ಮಹೋನ್ನತ ಸಾಧನೆ ಮಾಡಿದವರ ಕಥನವೇ? ಹಾಗಿದ್ದರೆ ಮಹೋನ್ನತ ಎಂದರೇನು? ಕಟ್ಟಡ ಕಟ್ಟಲು ಸಿದ್ಧ ಪಡಿಯಚ್ಚಿನ ಕಲ್ಲುಗಳು ಮಾತ್ರ ಸಾಕಾಗದು. ಅವುಗಳನ್ನು ಬೆಸೆಯಲು ಪುಡಿ ಚೂಪುಗಲ್ಲುಗಳೂ ಬೇಕು. ಆ ಚೂಪುಗಲ್ಲುಗಳೂ ಅದೆಷ್ಟೋ ಉಳಿಪೆಟ್ಟು ತಿಂದೇ ಬಂದಿರುವುದು ತಾನೇ? ಜೀವನ ಚರಿತ್ರೆ ಬದುಕಿನ ತಾತ್ವಿಕತೆಗೆ ಕರೆಯುತ್ತಿದೆ. ನಾವೀಗ ವಿಸ್ಕೃತಿಯನ್ನು ನೀಗಿಕೊಳ್ಳುವ ಜನ ಚರಿತ್ರೆಯ ಮರುಸಂಕಥನದ ಅಗತ್ಯದಲ್ಲಿದ್ದೇವೆ. ಈ ಪುಸ್ತಕ ಅಂತಹ ಪ್ರಯತ್ನ.

~ವಿನಯಾ ಒಕ್ಕುಂದ (ಮುನ್ನುಡಿಯಿಂದ)

ನಿಮ್ಮ ಮನಸ್ಸಿನ ಮಾಲೀಕರಾಗಿ ನಿಮ್ಮ ಬದುಕಿನ ಮೇಲೆ ಪ್ರಭುತ್ವ ಸಾಧಿಸಿನೀವು ಯೋಚಿಸಿದಂತೆ ನಿಮ್ಮ ಬದುಕು!You Become What You Thinkಮೂಲ      :...
07/09/2026

ನಿಮ್ಮ ಮನಸ್ಸಿನ ಮಾಲೀಕರಾಗಿ ನಿಮ್ಮ ಬದುಕಿನ ಮೇಲೆ ಪ್ರಭುತ್ವ ಸಾಧಿಸಿ

ನೀವು ಯೋಚಿಸಿದಂತೆ ನಿಮ್ಮ ಬದುಕು!

You Become What You Think

ಮೂಲ : ಶುಭಂ ಕುಮಾರ್ ಸಿಂಗ್
ಕನ್ನಡಕ್ಕೆ : ರಾಜೇಶ್ವರಿ ಜಯಕೃಷ್ಣ
ಮುಖಬೆಲೆ : 250/-
ರಿಯಾಯಿತಿ : 10%
ಶಿಪ್ಪಿಂಗ್ : ಪ್ರತ್ಯೇಕ
ಸಂಪರ್ಕಿಸಿ : 099806 33644
ನಿಮ್ಮ ಸಂತೋಷ, ವೈಯಕ್ತಿಕ ಬೆಳವಣಿಗೆ, ಸಂಬಂಧಗಳು ಮತ್ತು ಮಾನಸಿಕ ಆರೋಗ್ಯವನ್ನು ವೃದ್ಧಿಸಲು ಸಹಕಾರಿ ಆಗಬಲ್ಲ ಉಪಯುಕ್ತ ಒಳನೋಟಗಳು ಈ ಕೃತಿಯಲ್ಲಿವೆ.

ನೀವು ನಿಮ್ಮ ಬದುಕನ್ನು ಸುಧಾರಿಸಿಕೊಳ್ಳುವ ಮಾರ್ಗವನ್ನು ಹುಡುಕುತ್ತಿರುವಿರಾ? ನಿಮ್ಮ ಬದುಕಲ್ಲಿ ಸಂತೋಷವನ್ನು ಹೆಚ್ಚಿಸಲು ಯತ್ನಿಸುವಿರಾ? ನಿಮ್ಮಲ್ಲಿನ ಸಂಪೂರ್ಣ ಸಾಮರ್ಥ್ಯವನ್ನು ಹೊರಗೆಳೆದು ಏನಾದರೂ ಸಾಧಿಸಲು ಪ್ರಯತ್ನಿಸುತ್ತಿರುವಿರಾ? ಹಾಗಾದರೆ, ಇದೋ ಇಲ್ಲಿದೆ, ನಿಮಗಾಗಿ ಈ ಪುಸ್ತಕ!

"ನೀವು ಯೋಚಿಸಿದಂತೆ ನಿಮ್ಮ ಬದುಕು!" ಕೃತಿಯು ವೈಯಕ್ತಿಕ ಬೆಳವಣಿಗೆಗೆ ಒಂದು ಅತ್ಯುತ್ತಮ ಮಾರ್ಗದರ್ಶಿ. ಇದರ ಒಳಪುಟಗಳಲ್ಲಿ ಉಪಯುಕ್ತ ಒಳನೋಟಗಳಿವೆ. ಇದು ನಿಮ್ಮ ಜೀವನ ಮತ್ತು ನಿಮ್ಮ ಸುತ್ತಮುತ್ತಲಿನ ಜಗತ್ತಿನ ಬಗೆಗಿನ ದೃಷ್ಟಿಕೋನವನ್ನು ಬದಲಿಸಲು ನಿಮಗೆ ಸಹಾಯ ಮಾಡಬಲ್ಲದು.

ನೀವು ನಿಮ್ಮೊಳಗಿನ ಆಂತರ್ಯವನ್ನು ಅರಿತುಕೊಂಡು ಬದುಕಲ್ಲಿ ಮುಂದಡಿ ಇಡಲು ನಿಮಗೆ ಈ ಪುಸ್ತಕವು ಸಹಕಾರಿ ಆಗಬಲ್ಲದು.

ಜೋಗಿ ಅವರದಕ್ಷಿಣಾಯನಮುಖಬೆಲೆ   : 495/-ರಿಯಾಯಿತಿ : 10%ಶಿಪ್ಪಿಂಗ್      : ಪ್ರತ್ಯೇಕಸಂಪರ್ಕಿಸಿ   : 099806 33644 ಸೂರ್ಯನು ಸಮಭಾಜಕ ವೃತ್ತ...
05/09/2026

ಜೋಗಿ ಅವರ
ದಕ್ಷಿಣಾಯನ

ಮುಖಬೆಲೆ : 495/-
ರಿಯಾಯಿತಿ : 10%
ಶಿಪ್ಪಿಂಗ್ : ಪ್ರತ್ಯೇಕ
ಸಂಪರ್ಕಿಸಿ : 099806 33644

ಸೂರ್ಯನು ಸಮಭಾಜಕ ವೃತ್ತದಿಂದ ದಕ್ಷಿಣಕ್ಕೆ ತಿರುಗಿ ತನ್ನ ಪಥ ಬದಲಿಸಿಕೊಳ್ಳುವ ಕಾಲ; ಈ ಅವಧಿ ದೇವತೆಗಳ ರಾತ್ರಿ; ದಕ್ಷಿಣಾಯನದಲ್ಲಿ ಹಗಲು ಕಡಿಮೆಯಿದ್ದು, ರಾತ್ರಿ ದೀರ್ಘ, ಒಂದು ಬಗೆಯ ಭಾಷಾ ಪ್ರಯೋಗ;

ಬಲಕ್ಕೆ ತಿರುಗುವುದು; ದಕ್ಷಿಣ ಮಾರ್ಗದಲ್ಲಿ ನಡೆಯುವುದು.

ಕಾಡು, ಕಡಲು, ಬಹು ಭಾಷೆಗಳು, ಧರ್ಮಗಳು, ಉತ್ಸವಗಳು, ಹೊಸತನದ ಹಂಬಲ, ದುಡಿಮೆಯ ಛಲ ಎಲ್ಲವುಗಳಿಂದ ಸೊಗಸುಗೂಡಿರುವ ಒಂದು ನೆಲ ಕಾಲಾಂತರದಲ್ಲಿ ಏನಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಕಷ್ಟ. ವೈಭವದ ಮೇರು ಏರಿದ ಊರುಗಳು ಕ್ಷುದ್ರತೆಯ ಆಳ ತಲುಪಿದ ಇತಿಹಾಸಗಳಿವೆ. ಮಲ್ಲಿಗೆಯ ನಾಡಿನಲ್ಲಿ ನೆತ್ತರು ಮಾತನಾಡುತ್ತದೆ. ಪ್ರಿಂಟು, ಪತ್ರಿಕೋದ್ಯಮ, ವಿದ್ಯೆ ಎಲ್ಲದರಲ್ಲೂ ಮೊದಲು ಎನಿಸಿಕೊಂಡ ದಕ್ಷಿಣ ಕನ್ನಡದ ಅಯನ ಯನ 'ಹೆಳವ 'ಹೆಳವನ ಹೆಗಲ ಮೇಲೆ ಕುರುಡ ಕುಳಿತಂತೆ' ಆಗಿರುವುದರ ಬಖೈರು ಈ ಕಾದಂಬರಿ.

- ಹರೀಶ್ ಕೇರ

ಕಾವ್ಯ ಪ್ರಿಯರಿಗಾಗಿ ಎರಡು ಬ್ಯೂಟಿಫುಲ್ ಕವನ ಸಂಕಲನಗಳು ಇಂದಿನಿಂದ ಲಭ್ಯ1. ಸವಿರಾಜ್ ಆನಂದೂರು : ಗಂಡಸರನ್ನು ಕೊಲ್ಲಿರಿ :₹130/-2. ಎಂ.ಆರ್.‌ ಕ...
04/09/2026

ಕಾವ್ಯ ಪ್ರಿಯರಿಗಾಗಿ ಎರಡು ಬ್ಯೂಟಿಫುಲ್ ಕವನ ಸಂಕಲನಗಳು ಇಂದಿನಿಂದ ಲಭ್ಯ

1. ಸವಿರಾಜ್ ಆನಂದೂರು : ಗಂಡಸರನ್ನು ಕೊಲ್ಲಿರಿ :₹130/-
2. ಎಂ.ಆರ್.‌ ಕಮಲ : ಕಾಡು ಅಂಜೂರದ ಹುಡುಗಿ : ₹ 120/-

ಎರಡೂ ಪುಸ್ತಕಗಳ ಒಟ್ಟು ಬೆಲೆ : ₹ 250/-
ವಿಶೇಷ ರಿಯಾಯಿತಿಯಲ್ಲಿ ₹ 210/- ಕ್ಕೆ
ಶಿಪ್ಪಿಂಗ್ : ಪ್ರತ್ಯೇಕ
ಸಂಪರ್ಕಿಸಿ : 099806 33644

ದಿ ಎವೆರಿ ಡೇ ಹೀರೋ‌ ಮ್ಯಾನಿಫೆಸ್ಟೋಲೇಖಕರು    : ರಾಬಿನ್ ಶರ್ಮಾಮುಖಬೆಲೆ   : 350/-ರಿಯಾಯಿತಿ : 10%ಶಿಪ್ಪಿಂಗ್      : ಪ್ರತ್ಯೇಕ ಸಂಪರ್ಕಿಸಿ...
04/09/2026

ದಿ ಎವೆರಿ ಡೇ ಹೀರೋ‌ ಮ್ಯಾನಿಫೆಸ್ಟೋ

ಲೇಖಕರು : ರಾಬಿನ್ ಶರ್ಮಾ
ಮುಖಬೆಲೆ : 350/-
ರಿಯಾಯಿತಿ : 10%
ಶಿಪ್ಪಿಂಗ್ : ಪ್ರತ್ಯೇಕ
ಸಂಪರ್ಕಿಸಿ : 099806 33644

ಇದು ನಿಮ್ಮ ಸಮಯ EHM ಇದು ನಿಮ್ಮ ಪ್ಲೇಬುಕ್

ಸುಪ್ರಸಿದ್ಧ ನಾಯಕತ್ವ ಮತ್ತು ಪ್ರತಿಷ್ಠಿತ ಕಾರ್ಯಕ್ರಮತೆ ಪರಿಣಿತ ರಾಜನ್ ಶರ್ಮಾಅವರು ಕಳೆದ ಇಪ್ಪತ್ತೈದು ವರ್ಷಕ್ಕೂ ರ್ಸಕ್ಕೂ ಹೆಚ್ಚು ದೈತ್ಯರು, ವೃತ್ತಿಪರ ಕ್ರೀಡಾತಾರೆಯರು ಮನೋರಂಜನಾ ಕ್ಷೇತ್ರದ ಶ್ರೇಷ್ಠರಿಗೆ ತಮ್ಮ ಅತ್ಯುನ್ನತವಾದ ತವಾದ ಮಹಾತ್ವಾಕಾಂಕ್ಷೆಗಳನ್ನು ದೈನಂದಿನ ಫಲಿತಾಂಶಗಳನ್ನಾಗಿ ಪರಿವರಿರ್ತಿಸಿಕೊಳ್ಳುವ ಕ್ರಾಂತಿಕಾರಿ ವಿಧಾನಗಳನ್ನು ಕಲಿಸಿಕೊಟ್ಟಿದ್ದಾರೆ.

ಈಗ, 'ದ ಎವೆರಿ' ಡೇ ಹೀರೋ ಮ್ಯಾನಿಫೆಸ್ಟೋ-ನಿಮ್ಮೊಳಗಿನ ಹೀರೋ ಹೊರ ತನ್ನಿ' ಎಂಬ ಅವರ ಈ ಮೇರುಕೃತಿಯಲ್ಲಿ ತಮ್ಮ ಮಾರ್ಗದರ್ಶನ ವಿಧಾನದ ಭಾಗವಾದ ಅತ್ಯುತ್ತಮವಾದ ತತ್ತ್ವಗಳು ಮತ್ತು ತಂತ್ರಗಳನ್ನು ಅಮೂಲ್ಯವಾದ ಈ ಕೃತಿಯ ರೂಪದಲ್ಲಿ ಭಟ್ಟಿ ಇಳಿಸಿದ್ದಾರೆ. ಇದು ಒಂದು ಕಡೆ ಅಮೋಘವಾದ ಉತ್ಪಾದಕತೆಯ ಕುರಿತ ಕೈಪಿಡಿಯಾದರೆ, ಇನ್ನೊಂದು ಕಡೆ, ಜಾಗತಿಕ ಮಟ್ಟದ ಜೀವನವನ್ನು ನಡೆಸುವ ಕುರಿತ ಮಾರ್ಗಸೂಚಿಯಾಗಿದೆ; ಮತ್ತೊಂದು ಕಡೆ, ಜಗತ್ತನ್ನು ಎತ್ತಿಕೊಳ್ಳುವ ತಾಕತ್ತಿನ ಆಧ್ಯಾತ್ಮಿಕ ಹೆವಿವೇಟ್ ಆಗುವಂತೆ ಮಾಡುವ ಕೈದೀವಿಗೆಯಾಗಿದೆ.

ಈ ಅಭೂತಪೂರ್ವವಾದ ಅನನ್ಯ ಪುಸ್ತಕದ ಪುಟಗಳಲ್ಲಿ ನಿಮಗೆ ಕಂಡು ಬರುತ್ತದೆ:

* ಜಗತ್ತಿನಲ್ಲಿರುವ ಅತ್ಯಂತ ಸೃಜನಶೀಲ, ಉತ್ಪಾದನಾಶೀಲ ಮತ್ತು ಸಮೃದ್ಧಿಶೀಲ ವ್ಯಕ್ತಿಗಳು ಶ್ರೇಷ್ಠ ಅಭ್ಯಾಸಗಳನ್ನು ಹೇಗೆ ಹಾಕಿಕೊಳ್ಳುತ್ತಾರೆ. ಹೇಗೆ ತಮ್ಮ ದಿನಗಳನ್ನು ನಡೆಸುತ್ತಾರೆ ಮತ್ತು ತಮ್ಮ ಉನ್ನತ ಬದುಕುಗಳನ್ನು ಹೇಗೆ ಸಂಯೋಚಿಸಿಕೊಳ್ಳುತ್ತಾರೆ

* ನಿಮ್ಮ ಸಾರ್ವಭೌಮ ಧೀಶಕ್ತಿಯನ್ನು ಸಾಕಾರಗೊಳಿಸುವಲ್ಲಿ ನಿಮ್ಮ ಶಕ್ತಿಯನ್ನು ಉನ್ನತೀಕರಿಸುವಲ್ಲಿ, ಚೈತನ್ಯವನ್ನು ವೃದ್ಧಿಸಿಕೊಳ್ಳುವಲ್ಲಿ ಮತ್ತು ನಿಮ್ಮ ಜೀವಿತಾವಧಿಯನ್ನು ಹೆಚ್ಚಿಸಿಕೊಳ್ಳುವಲ್ಲಿ ಇರುವ ಶತ್ವಯುತ ಅಭ್ಯಾಸಗಳು

* ನಿಮ್ಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಮಿಂಚುವ ಮತ್ತು ಮುಂದಿನ ಪೀಳಿಗೆಯನ್ನು ಬೆಳಗಿಸುವ ನಿಜವಾದ ಮೇರುಕೃತಿಯನ್ನು ರಚಿಸುವ ಕುರಿತ ಸುಪ್ರಸಿದ್ದ ಬ್ಲೂಪ್ರಿಂಟ್

* ತೊಂದರೆಗಳನ್ನು ಗೆಲುವುಗಳನ್ನಾಗಿ, ಭಯಗಳನ್ನು ಇಂಧನವನ್ನಾಗಿ ಮತ್ತು ಹಳೆಯ ನೋವುಗಳನ್ನು ದೈನಂದಿನ ಹೀರೋಯಿಸಂ ಆಗಿ ಪರಿವರ್ತಿಸುವ ನರವಿಜ್ಞಾನ ಆಧಾರಿತ ತಂತ್ರಗಳು

* ಈ ಸುಂದರವಾದ ಬದುಕನ್ನು ಕಟ್ಟಿಕೊಡುವ ಅಸಾಧಾರಣ ಮತ್ತು ಕಷ್ಟದಿಂದ ಗಳಿಸಿದ) ಅರಿವು: ನಿಮ್ಮ ಜೀವಂತಿಕೆಯನ್ನು ಉನ್ನತೀಕರಿಸುವ, ಗಹನವಾದ ಪ್ರಶಾಂತತೆಯನ್ನು ಬೆಳೆಸುವ ಅಧ್ಯಾತ್ಮಿಕ ಸ್ವಾತಂತ್ರ್ಯಕ್ಕೆ ನೀಡುವ ಘನತೆ

Address

94/1-3, S Cross Road, Behind Pai Vista Convention Hall, Model House Street, Basavanagudi
Bangalore
560004

Opening Hours

Monday 9am - 10pm
Tuesday 9am - 10pm
Wednesday 9am - 10pm
Thursday 9am - 10pm
Friday 9am - 10pm
Saturday 9am - 10pm
Sunday 11am - 10pm

Alerts

Be the first to know and let us send you an email when Book Circle posts news and promotions. Your email address will not be used for any other purpose, and you can unsubscribe at any time.

Shortcuts

Share

Category