Lakshmikanth Venkateshaiah

Lakshmikanth Venkateshaiah Kannada Books, Movies ,Music,T Shirts, Greetings,Clocks,Posters,Charts,etc. Everything related to Ka Altogether we have 2800 movies in VCDs and 750 movies DVDs.
(209)

Today we have more than 22,000 items in our catalogue, which covers Kannada DVDs, VCDs, Audio CDs, MP3s, Books, Kannada T-Shirts, Greeting Cards, Kannada Clocks, Watches, Flags, Shawls and Badges. We have New & Old Movies, New & Old Film Songs, Film Hits, Film Stories, etc. We have a huge collection of Kannada Folk Music, Light Music, Devotional, Dramas, Yakshagaana, Comedy, Children, Hari Kathe,

Tulu, Sanskrit/Classical, Remix, Karaoke, Educational CDs, Television Serials, Ranga Geethegalu, etc. And we update them regularly with newly released items. Under Books Section, we have books by Poorna Chandra Tejaswi, Kuvempu, Karanth and other popular writers. Dramas by Kailasam, Karnad & others. Also Children’s Books, Recreational Books, Educational Books, Devotional Books, Proverbs, Vachanagalu, Dasa Padagalu, Shlokas, Tourism Books, Recipes, etc. Our “Online Service” is available across the Globe! Check out our website for more details and for the complete listing of all the items in our stock…


Address and Contact Info

Jayanagara

Total Kannada
#638, 31st Cross
10th B Main Road (Opposite Lane to Pavithra Hotel)
Jayanagar 4th Block, Bengalooru – 560 011
Phone : 080-41460325 , Cell : 92434 55672


Email : [email protected]

On Web : http://www.totalkannada.com
http://shopping.totalkannada.com

ಡಾ ಉಮೇಶ್ ಎಸ್ ಎನ್ ಅವರ ಚೊಚ್ಚಲ ಕವನ ಸಂಕಲನ ಹೃದಯ ಘೋಷ ಪುಸ್ತಕ ಬಿಡುಗಡೆಯ ಸಮಾರಂಭಮುಖ್ಯ ಅತಿಥಿಗಳುಡಾ. ಪಿ ವಿ ನಾರಾಯಣಹಿರಿಯ ಸಾಹಿತಿಗಳುಶಾಂತಾರ...
10/08/2024

ಡಾ ಉಮೇಶ್ ಎಸ್ ಎನ್ ಅವರ ಚೊಚ್ಚಲ ಕವನ ಸಂಕಲನ ಹೃದಯ ಘೋಷ ಪುಸ್ತಕ ಬಿಡುಗಡೆಯ ಸಮಾರಂಭ

ಮುಖ್ಯ ಅತಿಥಿಗಳು

ಡಾ. ಪಿ ವಿ ನಾರಾಯಣ
ಹಿರಿಯ ಸಾಹಿತಿಗಳು

ಶಾಂತಾರಾಮ್ ಶೆಟ್ಟಿ
ಕನ್ನಡ ಮತ್ತು ತುಳು ಸಾಹಿತಿ
ಐ-ಲೇಸಾ ಸ್ಥಾಪಕರು

ಕೃಷ್ಣರಾಜ ಪರಿಷನ್ಮಂದಿರ ಸಭಾಂಗಣ
ಕನ್ನಡ ಸಾಹಿತ್ಯ ಪರಿಷತ್ತು
ಪಂಪ ಮಹಾಕವಿ ರಸ್ತೆ
ಚಾಮರಾಜಪೇಟೆ
ಬೆಂಗಳೂರು

ಆಗಸ್ಟ್ ೧೧ , ಭಾನುವಾರ ಬೆಳಿಗ್ಗೆ 10:30 ಕ್ಕೆ

ಬೆಳಗಿನ ಉಪಾಹಾರ ನಮ್ಮೊಂದಿಗೆ

ನಿರೂಪಣೆ ನಾಗಶ್ರೀ

ಬೆಳಗ್ಗಿನ ಕಾಫಿ ಮತ್ತು ಮಧ್ಯಾನ್ಹದ ಊಟ ನಮ್ಮ ಜೊತೆಯಲ್ಲಿ

ತಮಗೆಲ್ಲರಿಗೂ ಆತ್ಮೀಯ ಸ್ವಾಗತ

‘ಎರಡನೇ ದೇವರು’ ಒಂದು ರೋಚಕ ಹಾಗೂ ಸೊಗಸಿನ ಓದಿನ ಸುಖವನ್ನು ನೀಡಿತುಓದುಗರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ಈ ಬರೆವಣಿಗೆ ಇದೆ....
02/04/2024

‘ಎರಡನೇ ದೇವರು’ ಒಂದು ರೋಚಕ ಹಾಗೂ ಸೊಗಸಿನ ಓದಿನ ಸುಖವನ್ನು ನೀಡಿತು

ಓದುಗರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ಈ ಬರೆವಣಿಗೆ ಇದೆ. ಕಾದಂಬರಿಯು ಒಂದು ರೋಚಕ ಹಾಗೂ ಸೊಗಸಿನ ಓದಿನ ಸುಖವನ್ನು ನೀಡಿತು ಎಂದಿದ್ದಾರೆ ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರು ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರ ಎರಡನೇ ದೇವರು ಕಾದಂಬರಿಯ ಕುರಿತು ಬರೆದ ಆಪ್ತ ಮಾತು ಇಲ್ಲಿವೆ.

ರಮೇಶರೇ,
ನಮಸ್ಕಾರ.

ನಿಮ್ಮ "ಎರಡನೇ ದೇವರು" ಕಾದಂಬರಿಯನ್ನು ಉಸಿರು ಬಿಗಿ ಹಿಡಿದು ಓದಿದ ಹಾಗೆ ಓದಿದೆ! ಅದು ಸಾಮಾಜಿಕ ವಸ್ತುವನ್ನು ಒಳಗೊಂಡಿದ್ದರೂ ಅದರ ನಡೆ ಸಸ್ಪೆನ್ಸ್ ಥ್ರಿಲ್ಲರ್ ಕಾದಂಬರಿಯದ್ದೇ. ಇಷ್ಟಕ್ಕೂ ಅದು ನಿಮಗೆ ಒಗ್ಗಿದ ಬರೆವಣಿಗೆಯ ರೀತಿಯೇ ಅಲ್ಲವೇ?

ವ್ಯಾಸಭಾರತದಲ್ಲಿ (ವಾಲ್ಮೀಕಿ ರಾಮಾಯಣದಲ್ಲಿ ಕೂಡಾ!) ಒಂದು ಶ್ಲೋಕ ಬರುತ್ತದೆ: ಯಥಾ ಕಾಷ್ಠಂಚ ಕಾಷ್ಠಂಚ...ಅಂತ! ಅಂದರೆ ಮಹಾ ಪ್ರವಾಹದಲ್ಲಿ ಎಲ್ಲಿಂದಲೋ ಬೇರೆ ಬೇರೆಯಾಗಿ ಬಂದ ಎರಡು ಮರದ ತುಂಡುಗಳು ಒಂದೆಡೆ ಜತೆಯಾಗುತ್ತಾ, ಮತ್ತೆ ಬೇರ್ಪಡುತ್ತಾ, ಜತೆಯಾಗುತ್ತಾ...ಸಾಗುತ್ತವೆ ಅಂತ! ನಮ್ಮ ಗಂಡು ಹೆಣ್ಣುಗಳ ಕಥೆಯೂ ಅದೇ ಅಲ್ಲವೇ?

ನಿಮ್ಮ ಕಾದಂಬರಿಯಲ್ಲಿ ಬರುವ ಪೂರ್ಣ ಹಾಗೂ ನೇತ್ರಾರ ಪಾತ್ರಗಳೂ ಇದೇ ರೀತಿ ಎಲ್ಲಿಂದಲೋ ಬಂದು ಜತೆಯಾಗುತ್ತಾ ಬೇರ್ಪಡುತ್ತಾ ಸಾಗಿದವರು. ನಡುವೆ ಅನೇಕ ತಿರುವುಗಳಲ್ಲಿ ನಡೆಯುವ ಅಘಟಿತ ಘಟನಾವಳಿಗಳಿಗೆ ತಮ್ಮನ್ನು ಒಡ್ಡಿಕೊಳ್ಳುತ್ತಾ, ತಪ್ಪುಗಳನ್ನು ಮಾಡುತ್ತಲೇ, ಅದರಿಂದ ಪಾಠ ಕಲಿತು ತಮ್ಮನ್ನು ತಿದ್ದಿಕೊಳ್ಳುತ್ತಾ...ಆ ಪ್ರಕ್ರಿಯೆಯಲ್ಲೇ ಹದಗೊಂಡು ಮಾಗುತ್ತಾ ಹೋಗುವ ರೀತಿ ತುಂಬಾ ಕುತೂಹಲಕಾರಿಯೂ ಸೊಗಸಾದುದೂ ಆಗಿದೆ.

ನಿಮ್ಮ ನಿರೂಪಣಾ ವಿಧಾನ, ಬಳಸಿದ ನಮ್ಮ ಕಡೆಯ ಮಾತಿನ ಧಾಟಿ, ಚಕಚಕನೆ ಘಟನೆಗಳು ಸಂಭವಿಸುತ್ತಾ ಹೋಗುವ ರೀತಿಯು ನಿಮಗೇ ವಿಶಿಷ್ಟವಾದುದು. ಓದುಗರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ಈ ಬರೆವಣಿಗೆ ಇದೆ. ಕಾದಂಬರಿಯು ಒಂದು ರೋಚಕ ಹಾಗೂ ಸೊಗಸಿನ ಓದಿನ ಸುಖವನ್ನು ನೀಡಿತು. ಅಭಿನಂದನೆಗಳು.

ನೀವು ಸಿಬಿಐ ಆಫೀಸಿನಲ್ಲಿ ಇರಬೇಕಾದವರು ತಪ್ಪಿ ಬೇರೆಡೆ ಉಳಿದು ಬಿಟ್ಟಿರಿ ಅಂತ ನನಗನ್ನಿಸುತ್ತದೆ! ಇಂಥದೇ ಇನ್ನಷ್ಟು ಕೃತಿಗಳನ್ನು ನನ್ನಂಥ ಬಡಪಾಯಿಯ ಓದಿಗೆ ಆಹಾರವಾಗಿ ನೀಡುತ್ತಾ ಇರಿ!

ನಮಸ್ಕಾರ,
ನಿಮ್ಮ,
ಸುಬ್ರಾಯ ಚೊಕ್ಕಾಡಿ

Book Brahma - One stop solution for all Kannada books and reviews. Global Kannada Literary Platform, connecting writers, readers, publishers & critics. Learn More!

https://www.youtube.com/watch?v=B6Uc9GjSe0I
01/04/2024

https://www.youtube.com/watch?v=B6Uc9GjSe0I

ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ.....

01/04/2024

ಅಮೀಬಾ ಕಾದಂಬರಿ ಬಿಡುಗಡೆ
- ರೋಮಾಂಚಕ, ಪತ್ತೇದಾರಿ ಕಾದಂಬರಿ

ಮುಖ್ಯ ಅತಿಥಿಗಳು

ಜೋಗಿ
ಪ್ರಖ್ಯಾತ ಬರಹಗಾರರು, ಕನ್ನಡಪ್ರಭ ಪತ್ರಿಕೆಯ ಸಂಪಾದಕರು

ಅನಂತ ಚಿನಿವಾರ್
ಪತ್ರಕರ್ತರು, ಸಂಪಾದಕರು

ಯಶೋಮತಿ ರವಿಬೆಳಗೆರೆ
ಪತ್ರಕರ್ತರು, ಬರಹಗಾರರು

ಎ ಪಿ ಅರ್ಜುನ್
ಖ್ಯಾತ ನಿರ್ದೇಶಕರು

ವಿರಾಟ್
ನಾಯಕನಟರು

ಸಿಹಿಕಹಿ ಚಂದ್ರು
ನಟ, ನಿರ್ಮಾಪಕ, ನಿರ್ದೇಶಕ

ನೆನಪಿರಲಿ ಪ್ರೇಮ್
ಖ್ಯಾತ ನಟರು

ಕನ್ನಡ ಸಾಹಿತ್ಯ ಪರಿಷತ್ತು
ಪಂಪ ಮಹಾಕವಿ ರಸ್ತೆ
ಚಾಮರಾಜಪೇಟೆ

ಏಪ್ರಿಲ್ 7 , ಭಾನುವಾರ ಬೆಳಿಗ್ಗೆ 10:30 ಕ್ಕೆ

ಬೆಳಗಿನ ಉಪಾಹಾರ ನಮ್ಮೊಂದಿಗೆ

ನಿರೂಪಣೆ ಪ್ರಶಾಂತ್ ಅತ್ರಿ

ತಮಗೆಲ್ಲರಿಗೂ ಆತ್ಮೀಯ ಸ್ವಾಗತ

12/03/2024
https://www.youtube.com/watch?v=BeTfLUXmeO8
12/03/2024

https://www.youtube.com/watch?v=BeTfLUXmeO8

ರಜತ ರಂಗದ ಧ್ರುವತಾರೆ, ಎರಡನೇ ದೇವರು, ಪಟ್ಟಣದ ಕತೆಗಳು ಮತ್ತು ನನ್ನ ನಿನ್ನ ನಡುವೆ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮಆಶ್ರಯ : ಟೋಟಲ್‌ ಕ.....

ಟೋಟಲ್ ಕನ್ನಡ ವತಿಯಿಂದ ವಿ. ಶ್ರೀಧರ್ ಅವರ ‘ರಜತ ರಂಗದ ಧ್ರುವತಾರೆ’ ಜೀವನಚರಿತ್ರೆ ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರ ‘ಎರಡನೇ ದೇವರು’ ಕಾದಂಬರಿ...
12/03/2024

ಟೋಟಲ್ ಕನ್ನಡ ವತಿಯಿಂದ ವಿ. ಶ್ರೀಧರ್ ಅವರ ‘ರಜತ ರಂಗದ ಧ್ರುವತಾರೆ’ ಜೀವನಚರಿತ್ರೆ ರಮೇಶ್ ಶೆಟ್ಟಿಗಾರ್ ಮಂಜೇಶ್ವರ ಅವರ ‘ಎರಡನೇ ದೇವರು’ ಕಾದಂಬರಿ, ಪುಂಡಲ್ಲೀಕ ಕಲ್ಲಿಗನೂರು ಅವರ ‘ಪಟ್ಟಣದ ಕತೆಗಳು’ ಕಥಾ ಸಂಕಲನ, ನರೇಂದ್ರ ಕಬ್ಬಿನಾಲೆ ಅವರ ‘ನನ್ನ ನಿನ್ನ ನಡುವೆ’ ಕೃತಿಗಳ ಲೋಕಾರ್ಪಣಾ ಸಮಾರಂಭವು 2024 ಮಾರ್ಚ್ 10ರ ಭಾನುವಾರಂದು ಬೆಂಗಳೂರಿನ ಬನಶಂಕರಿಯ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ನಡೆಯಿತು.

ಕೃತಿಗಳನ್ನು ಲೋಕರ್ಪಾಣೆಗೊಳಿಸಿ ಮಾತನಾಡಿದ ಖ್ಯಾತ ನಟ ಹಾಗೂ ನಿರ್ಮಾಪಕ ಶ್ರೀನಾಥ್, “ಕನ್ನಡ ರಂಗದ ಧ್ರುವತಾರೆ ಕಲ್ಪನಾ ನಮ್ಮೊಂದಿಗೆ ಬೆಳೆದು, ಹಲವನ್ನು ನಮಗೆ ತಿಳಿಸಿ, ಕಲಿಸಿ ಅವರೊಂದಿಗೆ ನಮ್ಮನ್ನು ಕೂಡ ಬೆಳೆಸಿದರು. ಅವರ ವ್ಯಕ್ತಿತ್ವ ಒಂದು ಪುಸ್ತಕ ಓದಿದಾಗ, ಸಿನಿಮಾ ನೋಡಿದಾಗ ಅಥವಾ ಅವರ ಕುರಿತು ಯಾರಾದರೂ ಮಾತನಾಡಿದಾಗ ಮಾತ್ರ ನೆನಪಿಗೆ ಬರುವುದಲ್ಲ,” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಉಪನ್ಯಾಸಕಿ ಭಾನುಮತಿ ಡಿ ಶೆಟ್ಟಿಗಾರ್ ಮಾತನಾಡಿ, “ಎರಡನೇ ದೇವರು ನಾಯಕಿ ಪ್ರಧಾನವಾದ ಕಾದಂಬರಿ. ತನ್ನನ್ನು ಒಬ್ಬ ಯಶಸ್ವಿ ಮಹಿಳೆಯಾಗಿಸಿಕೊಳ್ಳಬೇಕು ಎಂಬುವಂತಹ ಆಶಯದೊಂದಿಗೆ ಈ ಕೃತಿಯು ಸಾಗುತ್ತದೆ. ಇನ್ನು ಆ ಪಾತ್ರಧಾರಿ ಪಡುವ ಶ್ರಮ. ಮಾನಸಿಕ ತುಮುಲ, ಕಟ್ಟುಪಾಡುವಿನ ನಡುವಿನ ತೊಳಲಾಟ ಅನಿಯಂತ್ರಿತ ವಸ್ತು ಸ್ಥಿತಿ ಇಲ್ಲಿ ಮನಮುಟ್ಟುವಂತೆ ಮುದ್ರಿತವಾಗಿದೆ. ಕಾದಂಬರಿಯ ಕೆಲವೊಂದೊಡೆ ಕುತೂಹಲಭರಿತ ವ್ಯಕ್ತಿತ್ವಗಳನ್ನು ಕಾಣಬಹುದು. ಇನ್ನು ಕರಾವಳಿ ಭಾಗದ ನಂಬಿಕೆ ಆಚಾರಗಳನ್ನು ಸ್ಥೂಲವಾಗಿ ಚಿತ್ರಸಲಾಗಿದೆ.

‘ನನ್ನ ನಿನ್ನ ನಡುವೆ’ ಇಲ್ಲಿನ ಶೀಷಿಕೆಯೇ ಓದುಗನಿಗೆ ಕೌತಕ. ಪ್ರತಿಯೊಬ್ಬರ ದಿನನಿತ್ಯದ ಬದುಕಿನೊಂದಿಗೆ ಅವರೊಂದಿಗೆ ಒಡನಾಡುವವರ ವಸ್ತು ವಿಚಾರಗಳೇ ಶೀರ್ಷಿಕೆಯಾಗಿ ಓದುಗರಲ್ಲಿ ಕಾತುರವನ್ನು ಹುಟ್ಟಿಸುತ್ತದೆ. ಸಾಮಾನ್ಯವೆನ್ನಿಸುವ ವಿಚಾರಗಳು ಕೂಡ ಇಲ್ಲಿ ಕವಿಗೆ ವಿಶೇಷವಾಗಿ ಕಂಡಿದೆ. ಮನಸ್ಸಿಗೆ ತಟ್ಟಿದ ವಿಚಾರಗಳನ್ನು ಓದುಗರಿಗೆ ತಲುಪಿಸುವ ನಿಟ್ಟಿನಲ್ಲಿ, ಮನದಾಳದಲ್ಲಿ ಅಚ್ಚೊತ್ತುವ ಹಾಗೆ ಮಾಡುವಲ್ಲಿ ನರೇಂದ್ರ ಕಬ್ಬಿನಾಲೆ ಅವರು ಯಶಸ್ವಿಯಾಗಿದ್ದಾರೆ,’ ಎಂದರು.

ಹಿರಿಯ ಪತ್ರಕರ್ತ ಆರ್.ಜಿ. ಹಳ್ಳಿ ನಾಗರಾಜ್ ಮಾತನಾಡಿ, “ಕಾವ್ಯದಲ್ಲಿ ಕಥಾರೂಪಕಗಳು ಬಹಳ ಗಟ್ಟಿಯಾಗಿವೆ. ಕತೆ ಅನ್ನುವಂತಹ ರೂಪಕಕ್ಕೆ ನಾವು ಗದ್ಯದ ರೂಪಕವನ್ನು ಕೊಟ್ಟಿದ್ದೇವೆ ಅಷ್ಟೇ. ಕಥಾ ಪರಂಪರೇ ಅನ್ನುವಂತಹದ್ದೇ ಬಹಳ ದೊಡ್ಡದು. ಪಟ್ಟಣದ ಕತೆಗಳನ್ನು ಓದುತ್ತಾ ಹೋದರೆ ಬಹಳ ಅರ್ಥಪೂರ್ಣವಾದ ಸಂದೇಶವನ್ನು ನೀಡುತ್ತದೆ. ಸಂಭಾಷಣೆಯೇ ಇದರ ಜೀವಾಳ. ಬದುಕು ಸಹನೀಯವಾದ ಸಂದರ್ಭವನ್ನು ಇಲ್ಲಿನ ಕತೆಗಳು ಸೃಷ್ಟಿಸುತ್ತವೆ. ನಮ್ಮವೇ ಪಾತ್ರಗಳು ಅನ್ನಿಸುವಷ್ಟು ಇಲ್ಲಿನ ಕತೆಗಳು ಕಾಡುತ್ತವೆ,” ಎಂದು ತಿಳಿಸಿದರು.

ಹಾಸ್ಯೋತ್ತರ ಖ್ಯಾತಿಯ ವಾಗ್ಮಿ ವೈ.ವಿ. ಗುಂಡುರಾವ್ ಮಾತನಾಡಿ, “ಎರಡನೇ ದೇವರು ಕೃತಿಯು ಹೆಜ್ಜೆ ಹೆಜ್ಜೆಗೂ ಕೂತೂಹಲ, ಭಯಾನಕ, ರೋಚಕವಾಗಿ ಮೂಡಿಬಂದಿದೆ. ಇಲ್ಲಿನ ಕಥಾನಾಯಕಿ ಎಲ್ಲರಿಗೂ ಭಿನ್ನವಾಗಿ ಕಾಣಿಸುತ್ತಾಳೆ. ಇನ್ನು ಕೃತಿಯ ಶೀರ್ಷಿಕೆಯಂತೆಯೇ ಇಡೀ ಕೃತಿ ಎರಡನೇ ದೇವರು ಯಾರು ಎಂಬುವುದನ್ನೇ ತಿಳಿಸುತ್ತಾ ಹೋಗುತ್ತದೆ. ಒಟ್ಟಾರೆಯಾಗಿ ನಾನು ಈ ಕೃತಿಯನ್ನು ಓದುತ್ತಾ ಹೋದಂತೆ ನನಗೆ ಸಿನಿಮಾ ನೋಡಿದ ಹಾಗೆಯೇ ಭಾಸವಾಯಿತು,” ಎಂದರು.

ಖ್ಯಾತ ಕನ್ನಡ ಮತ್ತು ತುಳು ಸಾಹಿತಿ ಶಾಂತಾರಾಮ್ ಶೆಟ್ಟಿ ಮಾತನಾಡಿ, “ಎರಡನೇ ದೇವರೆಂದು ನಾವೆಲ್ಲರೂ ಕೂಡ ತಾಯಿಯನ್ನು ಪೂಜಿಸುತ್ತೇವೆ. ಈ ‘ಎರಡನೇ ದೇವರು’ ಕಾದಂಬರಿಯೂ ಕೂಡ ಹೆಣ್ಣೊಬ್ಬಳ ಕಥನವನ್ನೇ ಹೇಳುತ್ತದೆ. ಇನ್ನು ಈ ವೇದಿಕೆಯಲ್ಲಿ ಉಪಸ್ಥಿತರಿರುವ ಎಲ್ಲರೂ ಕೂಡ ನನ್ನ ಕಣ್ಣಿಗೆ ದೇವರಂತೆಯೇ ಕಾಣುತ್ತಾರೆ. ಕಾರಣ ಅವರು ಸಾರಸ್ವತ ಲೋಕಕ್ಕೆ ಕೊಡುಗೆಯನ್ನು ನೀಡಿದವರು. ಆದ ಕಾರಣ ಅವರನ್ನು ಕೂಡ ದೇವರೆಂದು ನಾನು ಕರೆಯಲು ಬಯಸುತ್ತೇನೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಾಲ್ಕು ಕೃತಿಗಳ ಲೇಖಕರಾದ ವಿ. ಶ್ರೀಧರ್, ರಮೇಶ್ ಶೆಟ್ಟಿಗಾರ್ ಮಂಜೇಶ್ವರ, ಪುಂಡಲೀಕ ಕಲ್ಲಿಗನೂರು, ನರೇಂದ್ರ ಕಬ್ಬಿನಾಲೆ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸುಧೀಂದ್ರ ಅವರು ನಿರೂಪಿಸಿದರು.

24/01/2024

Address

Jayanagar
Bangalore
560011

Opening Hours

Monday 9:30am - 9:30pm
Tuesday 9:30am - 9:30pm
Wednesday 9:30am - 9:30pm
Thursday 9:30am - 9:30pm
Friday 9:30am - 9:30pm
Saturday 9:30am - 9:30pm
Sunday 9:30am - 9:30pm

Telephone

+918041460325

Alerts

Be the first to know and let us send you an email when Lakshmikanth Venkateshaiah posts news and promotions. Your email address will not be used for any other purpose, and you can unsubscribe at any time.

Contact The Business

Send a message to Lakshmikanth Venkateshaiah:

Share

Category