RalliHeart Agri

RalliHeart Agri Live Green, Live Healthy! NityaPooja.in is an online portal from RalliHeart.Agri is an initiative to connect the farmer to the end-user.

We are beginning our humble business with the daily routine of offering prayers to the almighty to bestow us with health, wealth and good knowledge.

Nature is great..
31/08/2022

Nature is great..

  - The   of
31/08/2022

- The of

Ganesha Chaturthi - The Festival of the Elephant God

22/03/2021

ನಮ್ಮಲ್ಲಿ ಕರಿಬೇವು ಎಂದು ಯಾರಿಗೂ  ಪರಿಚಯಿಸುವ ಅಗತ್ಯವೇ ಇಲ್ಲ. ಅಷ್ಟೊಂದು ದಿನ ನಿತ್ಯದ ಅಡುಗೆಯಲ್ಲಿ ಇದರ ಬಳಕೆ ಇದೆ.  ಹೆಚ್ಚಿನ ಭಾರತೀಯ ಕುಟುಂ...
12/02/2021

ನಮ್ಮಲ್ಲಿ ಕರಿಬೇವು ಎಂದು ಯಾರಿಗೂ ಪರಿಚಯಿಸುವ ಅಗತ್ಯವೇ ಇಲ್ಲ. ಅಷ್ಟೊಂದು ದಿನ ನಿತ್ಯದ ಅಡುಗೆಯಲ್ಲಿ ಇದರ ಬಳಕೆ ಇದೆ.

ಹೆಚ್ಚಿನ ಭಾರತೀಯ ಕುಟುಂಬಗಳು ತಮ್ಮ ದಿನನಿತ್ಯದ ಅಡುಗೆಯಲ್ಲಿ ಕರಿಬೇವಿನ ಎಲೆಗಳನ್ನು ಬಳಸುತ್ತಾರೆ. ವಿಶೇಷವಾಗಿ ಇದರ ಪರಿಮಳವನ್ನು ನಾವು ಮಾಡುವ ಊಟಕ್ಕೆ ಸೇರಿಸಲು. ಆದರೆ ನಾವು ಊಟ ಮಾಡುವಾಗ ಈ ಕರಿಬೇವಿನ ಎಲೆಗಳನ್ನು ತೆಗೆದು ಪಕ್ಕಕ್ಕೆ ಇಡುತ್ತೇವೆ. ಬಹುಶಃ ಕರಿಬೇವಿನ ಎಲೆಗಳು ನೀಡುವ ಅದ್ಭುತ ಪ್ರಯೋಜನಗಳನ್ನು ನಾವು ಒಮ್ಮೆ ತಿಳಿದುಕೊಂಡರೆ ಅವುಗಳನ್ನು ಊಟದ ಜೊತೆಯಲ್ಲಿ ತಿನ್ನಲು ಪ್ರಾರಂಭಿಸುತ್ತೇವೆ.

ಕರಿಬೇವು ಅಥವ ಸಾಮಾನ್ಯವಾಗಿ ಇಂಗ್ಲೀಷ್ ನಲ್ಲಿ ಕರೆಯುವ curry leaves ನಮ್ಮಲ್ಲಿ 15- 20 ಅಡಿಗಳ ಎತ್ತರ ಎಲ್ಲೆಡೆ ಬೆಳೆಯುವ ಪುಟ್ಟ ಮರ. ಇದರ ಸಸ್ಯ ಶಾಸ್ತ್ರೀಯ ಹೆಸರು Murraya koenigii, ಕುಟುಂಬ Rutaceae.

ಆಯುರ್ವೇದದಲ್ಲಿ, ಕರಿಬೇವಿನ ಎಲೆಗಳನ್ನು " ಕೃಷ್ಣನಿಂಬ " ಎಂದು ಕರೆಯುತ್ತಾರೆ. ಈ ಕರಿಬೇವಿನ ರಕ್ಷಣೆಯನ್ನು ಸ್ವಯಂ ಶ್ರೀ ಕೃಷ್ಣ ಮಾಡುತ್ತಾನೆ ಎಂಬ ನಂಬಿಕೆಯಿದೆ.

ಶೇಕಡ 65 % ತೇವಾಂಶ ಇರುವ ಎಲೆಗಳಲ್ಲಿ, ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ, ರಂಜಕ, ಕಬ್ಬಿಣ ಜೊತೆಗೆ ನಮ್ಮ ಶರೀರಕ್ಕೆ ಅವಶ್ಯಕತೆ ಇರುವ ವಿಟಾಮಿನ್ ಗಳು ಮತ್ತು ಉಪಯುಕ್ತ Flavonoids ಗಳಿವೆ. ಇದರಲ್ಲಿರುವ ಪೋಷಕಾಂಶಗಳ ಕಾರಣದಿಂದಾಗಿ ಕರಿಬೇವಿನ ಎಲೆಗಳನ್ನು ಸಾಂಪ್ರದಾಯಿಕ ಆಯುರ್ವೇದ ಮತ್ತು ಮನೆಮದ್ದು ಔಷದಗಳಲ್ಲಿ, ವಿವಿಧ ಆರೋಗ್ಯ ಪರಿಸ್ಥಿತಿಗಳ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಗಾಗಿ ಬಳಸಲಾಗುತ್ತದೆ.

ಕರಿಬೇವಿನ ಸೊಪ್ಪಿನಲ್ಲಿ ಇರುವ Girinimbine ಎಂಬ ಅತೀ ವಿಶಿಷ್ಟವಾದ ಒಂದು ರಾಸಾಯನಿಕ ಇದರ ಸುವಾಸನೆಗೆ ಕಾರಣ. ಜೊತೆಗೆ ಈ Girinimbine ಹಲವು ಔಷಧೀಯ ಗುಣಗಳನ್ನೂ ಸಹ ಹೊಂದಿದೆ.

- ಕರಿಬೇವಿನ ಎಲೆಗಳು ದೇಹದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಸಕ್ರಿಯಗೊಳಿಸಿ ಅವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಕರಿಬೇವಿನ ಎಲೆಗಳಲ್ಲಿರುವ ಹೆಚ್ಚಿನ ನಾರಿನ ಅಂಶವು ನಾವು ಸೇವಿಸುವ ಆಹಾರದಲ್ಲಿನ Corbohydrate ಅಂಶ ರಕ್ತದಲ್ಲಿ ಗ್ಲೂಕೋಸ್ ಆಗಿ ವಿಭಜಿಸುವುದನ್ನು ನಿಧಾನಗೊಳಿಸುತ್ತದೆ, ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

ಕಡಿಮೆ GI ( Glycemic Index) ಆಹಾರದಲ್ಲಿ ಕರಿಬೇವಿನ ಎಲೆಗಳನ್ನು ಸೇರಿಸುವುದರಿಂದ ಮಧುಮೇಹ ಇರುವವರಿಗೆ ಕರಿಬೇವು ಅದ್ಭುತವಾಗಿ ಕೆಲಸ ಮಾಡುತ್ತದೆ.

- ರಕ್ತಹೀನತೆಗೆ ( Anemic ) ಕಬ್ಬಿಣದ ಕೊರತೆಯು ಸಾಮಾನ್ಯ ಕಾರಣವಾಗಿದೆ. ಕರಿಬೇವಿನ ಎಲೆಗಳು ಕಬ್ಬಿಣ ಮತ್ತು ಫೋಲಿಕ್ ಆಮ್ಲದ ಸಮೃದ್ಧ ಮೂಲವಾಗಿರುವುದರಿಂದ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಅತ್ಯಂತ ಪರಿಣಾಮಕಾರಿ. ಸಾಮಾನ್ಯವಾಗಿ ಕಬ್ಬಿಣದ ಸಮೃದ್ಧ ಮೂಲಗಳಿಗೆ ದೇಹದಲ್ಲಿ ಹೀರಿಕೊಳ್ಳಲು ಫೋಲಿಕ್ ಆಮ್ಲದ ಸೇವನೆಯ ಅಗತ್ಯವಿರುತ್ತದೆ. ಕರಿಬೇವಿನ ಎಲೆಗಳಲ್ಲಿರುವ ಫೋಲಿಕ್ ಆಮ್ಲದ ಹೆಚ್ಚಿನ ಅಂಶವು ಅದನ್ನು ನೋಡಿಕೊಳ್ಳುತ್ತದೆ. ಕರಿಬೇವಿನ ಎಲೆಗಳು ಪ್ರಬಲ ರಕ್ತ ಶುದ್ಧೀಕರಣಕಾರವಾಗಿಯೂ ಕಾರ್ಯನಿರ್ವಹಿಸುತ್ತವೆ.

ಕರಿಬೇವಿನ ಎಲೆಗಳು ಉತ್ತಮ ಜೀರ್ಣಕಾರಕ. ಜೊತೆಗೆ ನಾರಿನಂಶವು ಹೆಚ್ಚಿರುವುದರಿಂದ ಕರಿಬೇವಿನ ಕರುಳಿನ ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ಹಾಗೂ ನೈಸರ್ಗಿಕ ಉತ್ತೇಜಕ ಮತ್ತು ಆದರಿಂದ ಹಸಿವನ್ನು ಹೆಚ್ಚಿಸುತ್ತದೆ. ಇದರ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳು ಅತಿಸಾರ, ಭೇದಿ, ಹೊಟ್ಟೆಯ ಉಬ್ಬರ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.

- ಕರಿಬೇವಿನ ಎಲೆಗಳು ಮಲ್ಟಿವಿಟಾಮಿನ್‌ಗಳು, ಪ್ರೋಟೀನ್ ಮತ್ತು ಇತರ ಪೋಷಕಾಂಶಗಳ ಉಗ್ರಾಣವಾಗಿದೆ. ಹಾನಿಗೊಳಗಾದ ಕೂದಲಿಗೆ ಚಿಕಿತ್ಸೆ ನೀಡಲು, ಕೂದಲಿನ ಬೇರುಗಳನ್ನು ಬಲಪಡಿಸಲು, ತಲೆಹೊಟ್ಟಿಗೆ ಚಿಕಿತ್ಸೆ ನೀಡಲು ಮತ್ತು ಅಂತಿಮವಾಗಿ ಕೂದಲು ಉದುರುವುದನ್ನು ತಡೆಯಲು ಇದು ತುಂಬಾ ಪರಿಣಾಮಕಾರಿಯಾಗಿದೆ.

ಕರಿಬೇವಿನ ಸೊಪ್ಪನ್ನು ಚೆನ್ನಾಗಿ ರುಬ್ಬಿಕೊಂಡು, ಹುಳಿ ಮೊಸರಿನಲ್ಲಿ ಕಲಸಿ ಒಂದರ್ಧ ಘಂಟೆ ಹಾಗೆಯೇ ಬಿಟ್ಟು ನಂತರ ತಲೆಯ ಬುಡದಿಂದ ಮಸಾಜ್ ಮಾಡುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ. ಹೊಟ್ಟು ಆಗುವುದಿಲ್ಲ. ಜೊತೆಗೆ ಕೂದಲು ಶೀಘ್ರವಾಗಿ ಬೆಳೆಯುತ್ತೆ.

- ಕ್ಯಾಲ್ಸಿಯಂ ಮತ್ತು Phosphorus ಕರಿಬೇವಿನ ಎಲೆಗಳಲ್ಲಿ ಸಮೃದ್ಧವಾಗಿದ್ದು ಮೂಳೆಗಳ ಬಲವನ್ನು ಸುಧಾರಿಸುವ ಮೂಲಕ ಮತ್ತು ಆಸ್ಟಿಯೊಪೊರೋಸಿಸ್ ( Osteoporosis ) ನಂತಹ ರೋಗಗಳನ್ನು ತಡೆಗಟ್ಟುವ ಮೂಲಕ ಮೂಳೆಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

- ಕರಿಬೇವಿನ Antibacterial ಮತ್ತು Antiviral ಗುಣವು ಬಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕರಿಬೇವಿನ ಎಲೆಗಳಲ್ಲಿನ ತೈಲಗಳು ಒಸಡುಗಳು ಮತ್ತು ಹಲ್ಲುಗಳನ್ನು ಬಲಪಡಿಸಲು ಮತ್ತು ವಿವಿಧ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.

- ತೂಕ ನಷ್ಟಕ್ಕೆ - weight loss ಗೆ ಸಹಾಯ ಮಾಡುವುದು, ಅರಿವಿನ ಸಾಮರ್ಥ್ಯಗಳನ್ನು ಹೆಚ್ಚಿಸುವುದು, ಕ್ಯಾನ್ಸರ್ ತಡೆಗಟ್ಟುವುದು ಮುಂತಾದ ಕರಿಬೇವಿನ ಹಲವಾರು ಆರೋಗ್ಯ ಪ್ರಯೋಜನಗಳಿವೆ.

- ಸುಮಾರು 30-40 ಕರಿಬೇವಿನ ಎಲೆಗಳನ್ನು ಮತ್ತು 3-4 ಚಮಚ ಸೋoಪಿನ ಬೀಜಗಳನ್ನು ಹುರಿದು ಪುಡಿಮಾಡಿ, ಮಿಶ್ರಣವನ್ನು ಗಾಳಿಯಾಡದ ಬಾಟಲಿಯಲ್ಲಿ ಇಡಿ. ಈ ಪುಡಿ ಬಾಯಿಯನ್ನು ಶುಭ್ರವಾಗಿಡಲು - mouth freshener ತರ ಮತ್ತು ಜೀರ್ಣಕ್ರಿಯೆಗೆ ಉತ್ತಮ.

- ಸಕ್ಕರೆ ಕಾಯಿಲೆಗೆ - Diabetes - ನಿವಾರಣೆಗೆ ಒಂದೂವರೆ ಲೋಟ ನೀರನ್ನು ಕುದಿಯಲು ಇಡಿ. ಅದಕ್ಕೆ 10-15 ತಾಜಾ ಕರಿಬೇವಿನ ಎಲೆಗಳನ್ನು ಕೆಲವು ತಾಜಾ ಪುದೀನ ಎಲೆಗಳೊಂದಿಗೆ ಸೇರಿಸಿ. ಒಂದು ಚಿಟಿಕೆ ಚೆಕ್ಕೆ ಅಥವ ಚೆಕ್ಕೆ ಪುಡಿ ( Cinnamon ) ಸೇರಿಸಿ. ಇದು ಒಂದು ಲೋಟದಷ್ಟು ಇಂಗಿದ ಮೇಲೆ ಸ್ವಲ್ಪ ನಿಂಬೆ ರಸ ಹಾಕಿಕೊಂಡು ಕುಡಿಯಬೇಕು.

- ತಲೆಗೆ ಹಚ್ಚುವ ಎಣ್ಣೆಯನ್ನು ತಯಾರಿಸಲು ಶುದ್ಧ ತೆಂಗಿನ ಎಣ್ಣೆಗೆ 15 - 20 ತಾಜಾ ಕರಿಬೇವಿನ ಎಲೆಗಳನ್ನು ಸೇರಿಸಿ, ಎಲೆಗಳು ಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗುವವರೆಗೂ ಬಿಸಿ ಮಾಡಿ. ಅದನ್ನು ತಣ್ಣಗಾಗಲು ಬಿಡಿ. ಈ ಎಣ್ಣೆಯನ್ನು ವಾರಕ್ಕೊಮ್ಮೆಯಾದರೂ ನೆತ್ತಿಗೆ ಹಚ್ಚಿ. ಕೂದಲು ಸೊಂಪಾಗಿ ಬೆಳೆಯುತ್ತದೆ ಮತ್ತು ಬಿಳಿ ಕೂದಲು ಕಮ್ಮಿಯಾಗುತ್ತೆ. ತುರಿದ / ಸಣ್ಣಗೆ ಹೆಚ್ಚಿಕೊಂಡ ಬೆಟ್ಟದ ನೆಲ್ಲಿಕಾಯಿ ( Indian goose berry ) ಯನ್ನೂ ಸಹ ಬೆರೆಸಿದರೆ ಒಳ್ಳೆಯದು.

ಕರಿಬೇವಿನ ಹಣ್ಣುಗಳನ್ನು ತಿನ್ನಬಹುದು. ಆರೋಗ್ಯಕ್ಕೆ ಹಣ್ಣುಗಳು ಸಹ ಒಳ್ಳೆಯದು. ಹೂವುಗಳು ಸಹ ಸುವಾಸನೆಯುಕ್ತವಾಗಿರುತ್ತೆ ಮತ್ತು ಅದರ ಕಷಾಯ ಆರೋಗ್ಯಕ್ಕೆ ಒಳ್ಳೆಯದು.

ಕರಿಬೇವಿನ ತಾಜಾ ಎಲೆಗಳಿಂದ ಮಾಡಿದ ಕಷಾಯವನ್ನು ನಿಯಮಿತವಾಗಿ ಕುಡಿಯುವುದರಿಂದ ಪಾದದ ಮತ್ತು ದೇಹದ ಇತರ ಭಾಗಗಳಲ್ಲಿನ ಊತ ನಿವಾರಣೆಯಾಗುತ್ತೆ ಮತ್ತು ದೇಹದ ಹೆಚ್ಚಿನ ಕೊಬ್ಬು - ( Cholesterol ) ಕರಗುತ್ತೆ.

ಈ ಕರಿಬೇವಿನ ಬಗ್ಗೆ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಅಡುಗೆಗೆ ಆಗಲಿ ಅಥವಾ ಔಷಧೀಯ ಗುಣಗಳಿಗಾಗಲಿ ಉಪಯೋಗಿಸಲು ಎಲೆಗಳು ಸಾಧ್ಯವಾದಷ್ಟು fresh ಆಗಿರಬೇಕು. ಗಿಡದಿಂದ ಎಲೆ ಕಿತ್ತನಂತರ ಅದು ತನ್ನ ಸುವಾಸನೆ ಜೊತೆಗೆ ಔಷಧೀಯ ಗುಣಗಳನ್ನು ಕಳೆದುಕೊಳ್ಳುತ್ತಾ ಹೋಗುತ್ತೆ. ಆದ್ದರಿಂದ ನಿತ್ಯದ ಉಪಯೋಗಕ್ಕೆ ಮನೆಯಲ್ಲಿ ನೀವೇ ಕರಿಬೇವು ಬೆಳೆಸಿಕೊಳ್ಳಿ.

ಚಿತ್ರ, ಲೇಖನ :- ಮಂಜುನಾಥ್ ಪ್ರಸಾದ್.

ಎಲ್ಲರಿಗೂ ನಮಸ್ಕಾರ ನಾವು ತಿನ್ನುವ ಆಹಾರ ಹೇಗಿರಬೇಕುಯಾವ ತರಕಾರಿ ಉತ್ತಮಪ್ರತಿಯೊಂದು ತರಕಾರಿಯು ಔಷಧಬೀಟ್ರೂಟ್ ಇದರ ಉಪಯೋಗವನ್ನು ನಿಮ್ಮ ಮುಂದಿಟ್...
12/02/2021

ಎಲ್ಲರಿಗೂ ನಮಸ್ಕಾರ
ನಾವು ತಿನ್ನುವ ಆಹಾರ ಹೇಗಿರಬೇಕು
ಯಾವ ತರಕಾರಿ ಉತ್ತಮ
ಪ್ರತಿಯೊಂದು ತರಕಾರಿಯು ಔಷಧ
ಬೀಟ್ರೂಟ್ ಇದರ ಉಪಯೋಗವನ್ನು ನಿಮ್ಮ ಮುಂದಿಟ್ಟಿದ್ದೇನೆ
ಆರೋಗ್ಯದ ಬಗ್ಗೆ ಉಚಿತ ಮಾಹಿತಿಗಾಗಿ ಮಾತ್ರ ಸಂಪರ್ಕಿಸಿ

ಯಾವ ಕಾಯಿಲೆಗೆ ಔಷಧಿ
ಬೀಟ್ರೂಟ್ ಉಪಯೋಗ

ನಿಮ್ಮ ದಿನನಿತ್ಯದ ಆಹಾರದಲ್ಲಿ ಬೀಟ್ರೂಟ್‌ನ್ನು ಬಳಸುತ್ತಿದ್ದೀರಾ? ಇಷ್ಟವಿಲ್ಲವೆಂದು ನೀವಿದನ್ನು ಬಳಸದೇ ಇದ್ದರೆ ಬಹಳಷ್ಟನ್ನು ಕಳೆದುಕೊಳ್ಳುತ್ತಿದ್ದೀರಿ ಎಂದರ್ಥ. ನಿಮಗೆ ತಿಳಿದಿದೆಯೇ ಬೀಟ್ರೂಟ್ ಬ್ಲಡ್ ಸುಗರ್, ದೈಹಿಕ ದೌರ್ಬಲ್ಯ, ರಕ್ತಹೀನತೆಯಂತಹ ಆರೋಗ್ಯದ ಸಮಸ್ಯೆಗಳಿಗೆ ಬಹಳ ಉಪಕಾರಿ ಎಂದು ಸಾಬೀತಾಗಿದೆ. ಬೀಟ್ರೂಟ್ ಉಪಯೋಗ ಮತ್ತು ಯಾವ ಯಾವ ಕಾಯಿಲೆಗಳಿಗೆ ಇದು ದಿವ್ಯ ಔಷಧ ಎಂಬ ಪಟ್ಟಿ

1ಕ್ತದೊತ್ತಡ ಕಡಿಮೆ ಮಾಡಲು

2. ನಿರುಪಯುಕ್ತ ಕೊಲೆಸ್ಟ್ರಾಲ್ ತಗ್ಗಿಸಲು

3.ಗರ್ಭಿಣಿ ಮಹಿಳೆಯರಿಗೆ ಬಹುಪಯೋಗಿ

4. ಅಸ್ಥಿರಂಧ್ರತೆ (ಆಸ್ಟಿಯೊಪೊರೋಸಿಸ್) ( ಮೂಳೆ ಸವೆತ)

6. ಸಕ್ಕರೆ ಕಾಯಿಲೆ

6-ರಕ್ತಹೀನತೆ

7. ಬಳಲಿಕೆ

8. ಕ್ಯಾನ್ಸರ್ ಬರುವುದನ್ನು ತಪ್ಪಿಸಲು ಅನುಕೂಲಕರ

9-ಮಲಬದ್ಧತೆ

10.ಮೆದುಳಿನ ಶಕ್ತಿ ಹೆಚ್ಚಿಸಲು

ಮನೆಯಲ್ಲಿ ಬೀಟ್‌ರೂಟ್ ಜ್ಯೂಸ್‌ ಮಾಡುವುದು ಹೇಗೆ?
2-4 ಮಧ್ಯಮ ಗಾತ್ರದ ಬೀಟ್‌ರೂಟ್ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ಸಿಪ್ಪೆ ತೆಗೆದು, ಚಿಕ್ಕದಾಗಿ ಕಟ್ ಮಾಡಿ, ಜ್ಯೂಸ್ ಜಾರ್’ನಲ್ಲಿ ಹಾಕಿ, ರುಬ್ಬಿ.
ಎರಡು ಚಿಟಿಕೆ ಅರಿಶಿನ 1 ಟೀಸ್ಪೂನ್ ಬೆಲ್ಲ
ಅರ್ಧ ಟೀ ಸ್ಪೂನ್ ಶುದ್ಧ ಜೇನುತುಪ್ಪ
ಬೀಟ್ರೂಟ್ ರುಬ್ಬುವಾಗ ಇದನ್ನು ಹಾಕಿಕೊಳ್ಳಬೇಕು

ತೆಗೆದುಕೊಳ್ಳುವ ವಿಧಾನ ಮತ್ತು ಸಮಯ
ಬೆಳಗ್ಗೆ 10 ಗಂಟೆಗೆ ಅರ್ಧ ಲೋಟ ಜ್ಯೂಸ್ ಅರ್ಧ ಲೋಟ ಹಾಲು
ಸಂಜೆ 4 ಗಂಟೆಗೆ ಅರ್ಧ ಲೋಟ ಜ್ಯೂಸ್ ಅರ್ಧ ಲೋಟ ಅಕ್ಕಿ ತೊಳೆದ ನೀರಿನ ಜೊತೆ
ಕೆಲವೊಮ್ಮೆ ಮನುಷ್ಯನ ದೇಹ ಮತ್ತು ಪ್ರಕೃತಿ ಇದಕ್ಕೆ ಅನುಸಾರವಾಗಿ ಬದಲಾವಣೆಯಾಗುತ್ತದೆ

ಒಣದ್ರಾಕ್ಷಿ ಇರ್ಬೇಕಾದ್ರೆ ಬೇರೆ ಸಪ್ಪ್ಲಿಮೆಂಟ್ಸ್ ಯಾಕ್ರೀ ಬೇಕು?ಒಣದ್ರಾಕ್ಷಿಯಲ್ಲಿ ಕಬ್ಬಿಣ ಮತ್ತು ಸುಣ್ಣದ ಅಂಶವಿರುತ್ತದೆ. ಇದನ್ನು ಸೇವಿಸಿದ್...
21/12/2020

ಒಣದ್ರಾಕ್ಷಿ ಇರ್ಬೇಕಾದ್ರೆ ಬೇರೆ ಸಪ್ಪ್ಲಿಮೆಂಟ್ಸ್ ಯಾಕ್ರೀ ಬೇಕು?

ಒಣದ್ರಾಕ್ಷಿಯಲ್ಲಿ ಕಬ್ಬಿಣ ಮತ್ತು ಸುಣ್ಣದ ಅಂಶವಿರುತ್ತದೆ. ಇದನ್ನು ಸೇವಿಸಿದ್ದಲ್ಲಿ ಎಲಬುಗಳು ಶಕ್ತಿಯುತವಾಗುವುದಲ್ಲದೆ ರಕ್ತವೃದ್ಧಿಯಾಗುವುದು ಮತ್ತು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.ಫಲಗಳಲ್ಲಿ ಒಣದ್ರಾಕ್ಷಿಯೇ ಶ್ರೇಷ್ಠ.
೧) ಜೀರ್ಣಕ್ರಿಯೆಗೆ:
ಒಣದ್ರಾಕ್ಷಿಯಲ್ಲಿ ಪೊಟ್ಯಾಸಿಯಂ ಮತ್ತು ಮೆಗ್ನಿಶಿಯಂ ಅಂಶಗಳು ಹೇರಳವಾಗಿದ್ದು ಅಸಿಡಿಟಿ ಅನ್ನು ತಡೆಗಟ್ಟಿ ಕಲ್ಮಶಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ.
೨) ಮಲಬದ್ಧತೆಗೆ:
ಒಣದ್ರಾಕ್ಷಿಯಲ್ಲಿ ಅಧಿಕ ನಾರಿನಂಶವಿದ್ದು, ರಾತ್ರಿ ನೀರಲ್ಲಿ ನೆನಸಿಟ್ಟ ಒಣದ್ರಾಕ್ಷಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿದಿನವೂ ಸೇವಿಸಿದ್ದಲ್ಲಿ ಮಲಬದ್ಧತೆ ನಿವಾರಣೆಯಾಗುವುದು.
೩) ರಕ್ತ ಹೀನತೆಗೆ:
ಒಣದ್ರಾಕ್ಷಿಯಲ್ಲಿ ಅಧಿಕ ಐರನ್ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಗಳಿದ್ದು ರಕ್ತವೃದ್ಧಿಮಾಡುತ್ತದೆ. ಅದರಲ್ಲಿನ ಕಾಪರ್ ಅಂಶಗಳು ಕೆಂಪು ರಕ್ತಕಣಗಳ ಸಂಖ್ಯೆಯನ್ನು ಅಧಿಕಗೊಳಿಸುತ್ತದೆ.
೪) ಕ್ಯಾನ್ಸರ್ ತಡೆಗಟ್ಟುತ್ತದೆ:
ಒಣದ್ರಾಕ್ಷಿಯಲ್ಲಿರುವ ಯಥೇಚ್ಛ ಆಂಟಿ ಆಕ್ಸಿಡಾಂಟ್ ಗಳು ಗಡ್ಡೆ ಉತ್ಪತ್ತಿಯನ್ನು ಮತ್ತು ಕೊಲೊನ್ ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ.
೫) ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ:
ಒಣದ್ರಾಕ್ಷಿಯಲ್ಲಿರುವ ಅರ್ಜಿನೈನ್ ಎಂಬ ಅಮೈನೊ ಆಸಿಡ್ ಗಳು ಲೈಂಗಿಕ ಸಾಮರ್ಥ್ಯವನ್ನು ಅಧಿಕ ಗೊಳಿಸಿ ಪುರುಷರಲ್ಲಿ ಶಿಶ್ನ ನಿಮಿರುವಿಕೆ, ವೀರ್ಯಾಣು ಕಡಿಮೆಯಾಗುವಿಕೆ ಮುಂತಾದ ಸಮಸ್ಯೆಗಳನ್ನು ಕಡಿಮೆಮಾಡುತ್ತದೆ.
೬) ಕಣ್ಣಿನ ಆರೋಗ್ಯಕ್ಕೆ:
ಒಣದ್ರಾಕ್ಷಿಯಲ್ಲಿರುವ ವಿಟಮಿನ್ ಎ,ಬೀಟಾ ಕ್ಯಾರೋಟಿನ್,ಎ ಕ್ಯಾರೊಟಿನೋಯ್ಡ್ ಗಳು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದಲ್ಲದೆ ಅದ್ರಲ್ಲಿರುವ ಪೊಲಿಫಿನೋಲ್ ಆಂಟಿ ಆಕ್ಸಿಡಾಂಟ್ ಗಳು ಮ್ಯಾಕ್ಯುಲರ್ ಡಿಜೆನೆರೇಷನ್ ಕಡಿಮೆ ಮಾಡಿ ಕ್ಯಾಟರಾಕ್ಟ್ ಬರದಂತೆ ಕಾಪಾಡುತ್ತವೆ.
೭) ಹಲ್ಲಿನ ಆರೋಗ್ಯಕ್ಕೆ:
ಒಣದ್ರಾಕ್ಷಿಯಲ್ಲಿರುವ ಒಲೆನೋಯಿಕ್ ಆಸಿಡ್ ಗಳು ಹಲ್ಲುಗಳು ಹುಳುಕಾಗದಂತೆ ತಡೆಗಟ್ಟುತ್ತವೆ. ಮತ್ತು ಅದರಲ್ಲಿರುವ ಕ್ಯಾಲ್ಸಿಯಂ ಗಳು ಹಲ್ಲುಗಳು ಉದುರದಂತೆ ಕಾಪಾಡುತ್ತವೆ.
೮) ತೂಕ ಜಾಸ್ತಿ ಆಗಲು:
ಒಣದ್ರಾಕ್ಷಿಯಲ್ಲಿ ಅಧಿಕ ಸಕ್ಕರೆ ಅಂಶಗಳಿದ್ದು ಬೊಜ್ಜು ಹೆಚ್ಚಾಗಿಸದೆ ತೂಕವನ್ನು ಹೆಚ್ಚುಮಾಡುತ್ತದೆ.

ಔಷಧೀಯ ಮೌಲ್ಯದ ಬಾಸ್ಮತಿ ಗಿಡ ಆಹಾರಕ್ಕೆ ವಿಶಿಷ್ಟ ರುಚಿ ಮತ್ತು ಪರಿಮಳ ನೀಡುವ ಬಾಸ್ಮತಿ ಗಿಡವು ಪೌಷ್ಟಿಕಾಂಶಗಳ ಆಗರವಾಗಿದೆ. ಇದು ಉಷ್ಣ ವಲಯ ಮತ್ತ...
05/12/2020

ಔಷಧೀಯ ಮೌಲ್ಯದ ಬಾಸ್ಮತಿ ಗಿಡ

ಆಹಾರಕ್ಕೆ ವಿಶಿಷ್ಟ ರುಚಿ ಮತ್ತು ಪರಿಮಳ ನೀಡುವ ಬಾಸ್ಮತಿ ಗಿಡವು ಪೌಷ್ಟಿಕಾಂಶಗಳ ಆಗರವಾಗಿದೆ. ಇದು ಉಷ್ಣ ವಲಯ ಮತ್ತು ಸಮಶೀತೋಷ್ಣ ವಲಯದ ಕಾಡುಗಳಲ್ಲಿ ನೈಸರ್ಗಿಕವಾಗಿ ಬೆಳೆಯುವ ಸಸ್ಯ. ಪಾಂಡನೇಸಿಯೇ ಕುಟುಂಬಕ್ಕೆ ಸೇರಿದೆ. ಗಾಢ ಹಸಿರು ಬಣ್ಣದ ಉದ್ದದ ಎಲೆಗಳನ್ನು ಹೊಂದಿರುತ್ತದೆ. ಇದರ ಮೂಲ ದಕ್ಷಿಣ ಪೂರ್ವ ಏಷ್ಯಾ. ಆಹಾರವಾಗಿ, ಔಷಧಿಯಾಗಿ, ಅಲಂಕಾರಿಕ ಗಿಡವಾಗಿ ಬಳಕೆಯಲ್ಲಿದೆ. ಭಾರತೀಯ, ಇಂಡೋನೇಷ್ಯಾ, ಸಿಂಗಪುರ, ಫಿಲಿಪೈನ್ಸ್, ಮಲೇಷ್ಯಾ, ಥಾಯಿ, ಬಾಂಗ್ಲಾದೇಶ ವಿಯೆಟ್ನಾಂ, ಬರ್ಮಾ ಅಡಿಗೆಗಳಲ್ಲಿ ಯಥೇಚ್ಛ ಉಪಯೋಗಿಸುವ ಸೊಪ್ಪು ಇದು. ಆಯುರ್ವೇದ, ಸಾಂಪ್ರದಾಯಿಕ ಔಷಧ ಪದ್ಧತಿಗಳಲ್ಲಿ ಇದನ್ನು ಬಳಸಿ ಅನೇಕ ಔಷಧಗಳನ್ನು ತಯಾರಿಸುವುದು ಇದೆ. ಇದರಲ್ಲಿ ಸಪೋನಿನ್, ಪಾಲಿಹಿನಲ್, ತಯಮಿನ್, ಅಲ್ಕೊಲೈಡ್ಸ್ ಮುಂತಾದ ಅಂಶಗಳಿದ್ದು ಇವು ಆರೋಗ್ಯಕ್ಕೆ ಪೂರಕವಾಗಿವೆ.

ಔಷಧಿಯಾಗಿ ಬಾಸ್ಮತಿ ಸೊಪ್ಪು:
ಇದರ ಸೊಪ್ಪನ್ನು ನೀರಿನಲ್ಲಿ ಕುದಿಸಿ ತಯಾರಿಸಿದ ಕಷಾಯ ಸೇವನೆಯಿಂದ ಜ್ವರ ಕಡಿಮೆಯಾಗುತ್ತದೆ. ಭಯ, ಉದ್ವೇಗ, ಆತಂಕ, ಒತ್ತಡ ನಿವಾರಣೆಯಲ್ಲಿ ಬಾಸ್ಮತಿ ಎಲೆಗಳ ಕಷಾಯ ಪರಿಣಾಮಕಾರಿ ಔಷಧ.
ಕುಷ್ಠ, ಗಾಯ, ಕಜ್ಜಿ, ಕಿವಿನೋವು, ತಲೆನೋವು, ಹೊಟ್ಟೆ ನೋವು, ಎದೆನೋವು ಆರ್ಥೈಟಿಸ್(ವಾತ)ಗೆ ಒಳ್ಳೆಯದು. ಆಹಾರದಲ್ಲಿ ಇದರ ಬಳಕೆಯಿಂದ ಬಾಣಂತಿಯರ ನಿಃಶಕ್ತಿ ನಿವಾರಣೆಯಾಗುವುದು. ಜತೆಗೆ ಹೆರಿಗೆಯ ಗಾಯಗಳು ಬಹು ಬೇಗನೆ ಒಣಗುತ್ತವೆ.
ಎಲೆಗಳನ್ನು ಜಗಿಯುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುವುದಲ್ಲದೆ ವಸಡು ದೃಢವಾಗುತ್ತದೆ.
ಇದರ ರಸವನ್ನು ಚರ್ಮಕ್ಕೆ ಲೇಪಿಸುವುದರಿಂದ ಸೊಳ್ಳೆ ಕಡಿತದಿಂದ ರಕ್ಷಣೆ ಸಿಗುತ್ತದೆ.
ಆಹಾರವಾಗಿ ಉಪಯೋಗಿಸುತ್ತಿದ್ದರೆ ಕೆಲವು ವಿಧದ ಕ್ಯಾನ್ಸರ್‍ಗಳು ವಾಸಿಯಾಗುವುದಲ್ಲದೆ ಕೆಲವು ವಿಧದ ಕ್ಯಾನ್ಸರ್ ಬಾರದಂತೆ ತಡೆಯುತ್ತದೆ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ.
ಈ ಗಿಡದ ಕಷಾಯದಿಂದ ರಕ್ತದ ಒತ್ತಡ ನಿವಾರಣೆಯಾಗುತ್ತದೆ. ಚರ್ಮದಲ್ಲಿ ಫಂಗಸ್ ಆಗಿ ಅಲರ್ಜಿ, ಚರ್ಮ ತುರಿಕೆಯಿಂದ ಬಿಳಿ ಆದರೆ ಇದರ ರಸ ಹಚ್ಚಿದರೆ ವಾಸಿಯಾಗುವುದು.
ಬಾಸ್ಮತಿ ಎಲೆಗಳನ್ನು ನೀರಿನಲ್ಲಿ ಅರೆದು ತಲೆಗೆ ಲೇಪಿಸಿದರೆ ತಲೆ ಹೊಟ್ಟು ನಿವಾರಣೆಯಾಗುವುದರ ಜತೆಗೆ ಕೂದಲು ಉದುರುವುದು ನಿಲ್ಲುತ್ತದೆ.
ಇದರ 3 ಎಲೆಗಳನ್ನು 3 ಕಪ್ ನೀರಿನಲ್ಲಿ ಕುದಿಸಿ. 2 ಕಪ್ ಆದಾಗ ಇಳಿಸಬೇಕು. ಬೆಳಿಗ್ಗೆ,ಸಂಜೆ ಈ ಕಷಾಯ ಸೇವಿಸಿದರೆ ನರ ದೌರ್ಬಲ್ಯ ಗುಣವಾಗುತ್ತದೆ.
ವಾತದ ಸಮಸ್ಯೆಯಿಂದ ಬಳಲುವವರು ಈ ಎಲೆಗಳನ್ನು ತೆಂಗಿನ ಎಣ್ಣೆಯಲ್ಲಿ ಕುದಿಸಿ ತಣಿಸಿ ನೋವಿರುವ ಭಾಗಕ್ಕೆ ಹಚ್ಚಿದರೆ ಪರಿಹಾರ.

ಬಾಸ್ಮತಿ ಚಹಾ: 4 ಬಾಸ್ಮತಿ ಎಲೆ, 5 ಏಲಕ್ಕಿ, ಶುಂಠಿ, ಸಕ್ಕರೆ ಸೇರಿಸಿ ಮಾಡಿದ ಚಹಾ ಮಕ್ಕಳಿಗೆ ಒಳ್ಳೆಯದು.
ಲಿವರ್‍ಗೆ ಉತ್ತಮ ಟಾನಿಕ್. ಇದನ್ನು ಬಳಸಿ ಬೇಸಿಗೆಯಲ್ಲಿ ಸೂರ್ಯನ ಕಿರಣಗಳಿಂದ ಚರ್ಮ ಕಪ್ಪಾಗುವುದನ್ನು ತಡೆಯಬಹುದು. ಸ್ನಾನದ ನೀರಿಗೆ ಇದರ ರಸ ಹಾಕಿದರೆ ಒಳ್ಳೆ ಸುಗಂಧ. ಆಹಾರಕ್ಕೆ ನೈಸರ್ಗಿಕ ಹಸಿರು ಬಣ್ಣ ನೀಡಲು ಇದನ್ನು ಬಳಸಿ ಪ್ರಯೋಜನ ಪಡೆಯಬಹುದಾಗಿದೆ.

ಬೆಳೆಯುವುದು ಸುಲಭ: ಯಾವುದೇ ವಿಶೇಷ ಆರೈಕೆ ಇಲ್ಲದೆ ಬೆಳೆಯುವ ಸಸ್ಯ. ತೋಟ ಅಥವಾ ಮನೆಯ ಹಿತ್ತಿಲಿನಲ್ಲಿ ಒಂದು ಬದಿಗೆ ನೆಟ್ಟರೆ ಯಾವುದೇ ಆರೈಕೆ ಇಲ್ಲದೆ ತನ್ನಿಂದ ತಾನೇ ಬೆಳೆದು ವೃದ್ಧಿಯಾಗುತ್ತದೆ. ಸ್ಥಳಾವಕಾಶದ ಕೊರತೆ ಇರುವವರು ಕುಂಡಗಳಲ್ಲಿಯೂ ಸಮೃದ್ಧವಾಗಿ ಬೆಳೆಸಬಹುದು. ಅಲಂಕಾರಿಕ ಸಸ್ಯದಂತೆ ಕಂಡುಬರುವ ಇದು ಮನೆ ಅಂಗಳದ ಸೌಂದರ್ಯವನ್ನೂ ಹೆಚ್ಚಿಸುತ್ತದೆ.
ಪಲಾವ್ ಮಾಡುವಾಗ ಒಂದು ತುಂಡು ಎಲೆ ಬಳಸಿದರೆ ಸಾಮಾನ್ಯ ಸೋನಾ ಮಸೂರಿ ಅಕ್ಕಿಗೂ ಬಾಸ್ಮತಿ ಅಕ್ಕಿಯ ಪರಿಮಳ ಹಾಗೂ ರುಚಿಯನ್ನು ನೀಡುತ್ತದೆ. ಪಲಾವ್, ಚಹಾ, ಕಷಾಯ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಇದನ್ನು ಆಹಾರದಲ್ಲಿ ಬಳಸುತ್ತಿದ್ದರೆ ಹಲವು ವ್ಯಾಧಿಗಳಿಂದ ದೂರವಿದ್ದು ಆರೋಗ್ಯ ಭಾಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು.

Courtesy-ಅನೂಷಾ ಹೊನ್ನೇಕೂಲು

01/12/2020
Today's youngsters invariably reach out for quick fixes like Eno or capsules to address their usual post-meal issues lik...
29/11/2020

Today's youngsters invariably reach out for quick fixes like Eno or capsules to address their usual post-meal issues like acidity and bloating, while the fragrant chewing gums after meals have become popular mouth fresheners. But there was a time when a commonly available natural herb acted as the panacea for all such post-meal problems. It was the humble betel leaf.

Since time immemorial, betel leaf has been considered very auspicious in Indian culture, as it signifies prosperity. It is usually gifted to family members, or exchanged among friends and relatives during special occasions, as it is believed to strengthen trust & relationships. However, apart from such cultural significance, there are a host of easily noticeable scientific benefits which helped it become an integral part of the daily lives of Indians for thousands of years.

One such significant benefit of betel leaf is that of its role as a post-meal natural supplement which helps in digestion. Thanks to its alkaline properties, it regulates pH levels of stomach acids, thereby acting as a natural anti-acidity agent, and prevents bloating (especially after heavy & spicy meals). Due to its anti-oxidant properties, it flushes out toxins efficiently from the digestive system, improving overall health in the long run.

It can also be combined with various other ingredients to address specific concerns, depending on the person's pitta & vata levels. For example, chewing betel leaf with gulkand provides a cooling effect on the body and prevents dizziness during hot summers, while lining a bit of slacked lime over the betel leaf helps in strengthening bones in the long run, and so on. Thus, Indians had been following the simple tradition of chewing betel leaf after meals for thousands of years, and reaping its immense benefits.

From the 20th century, as betel leaf got associated with to***co products like gutka, zarda, etc, modern Indians started looking down upon the normal betel leaf itself altogether, and thus the tradition witnessed significant decline. But by suddenly eliminating betel leaf from their lives altogether, the modern Indians actually ended up with a host of problems like acidity, bloating, indigestion, etc, leading to the influx of synthetic alternatives like Eno & tablets which have now invaded most Indian homes.

However, thanks to the recent efforts towards revival of this tradition, some popular restaurants have started offering betel leaf as part of their comprehensive lunch packages, thereby spreading further awareness about this miracle herb among today's youth. Also, due to growing interest in natural & holistic lifestyles, some of the health conscious Indians have begun to gradually embrace betel leaf as per Ayurvedic recommendations & guidelines.

By Guruprasad.

Address

Guni Agrahara
Bangalore
560089

Opening Hours

Monday 9am - 9pm
Tuesday 9am - 9pm
Wednesday 9am - 9pm
Thursday 9am - 9pm
Friday 9am - 9pm
Saturday 9am - 9pm
Sunday 9am - 9pm

Telephone

08041499494

Alerts

Be the first to know and let us send you an email when RalliHeart Agri posts news and promotions. Your email address will not be used for any other purpose, and you can unsubscribe at any time.

Share

Category