Prajodayaprakashana

Prajodayaprakashana ಸದಭಿರುಚಿಯ ಪುಸ್ತಕಗಳನ್ನು ಓದುಗರಿಗೆ ಪರಿಚಯಿಸುವ ಮತ್ತು ತಲುಪಿಸುವ ಪುಸ್ತಕದಂಗಡಿ

ಬಿ.ಎಸ್.ವೆಂಕಟಲಕ್ಷ್ಮಿ ಅವರ ‘ಪತ್ನಿಯರು ಕಂಡಂತೆ ಪ್ರಸಿದ್ಧರು’ ಪುಸ್ತಕದ ಒಂದು ಅಧ್ಯಾಯ 'ಕೆಂಡಸಂಪಿಗೆ'ಯಲ್ಲಿದೆ. ಈ ಬರಹದಲ್ಲಿ ಗೋಪಾಲಕೃಷ್ಣ ಅಡಿಗ...
13/09/2026

ಬಿ.ಎಸ್.ವೆಂಕಟಲಕ್ಷ್ಮಿ ಅವರ ‘ಪತ್ನಿಯರು ಕಂಡಂತೆ ಪ್ರಸಿದ್ಧರು’ ಪುಸ್ತಕದ ಒಂದು ಅಧ್ಯಾಯ 'ಕೆಂಡಸಂಪಿಗೆ'ಯಲ್ಲಿದೆ. ಈ ಬರಹದಲ್ಲಿ ಗೋಪಾಲಕೃಷ್ಣ ಅಡಿಗರ ಕುರಿತು ಅವರ ಪತ್ನಿ ಲಲಿತಾ ಅವರ ನೆನಪುಗಳಿವೆ. ಓದಲು ಲಿಂಕ್:
https://kendasampige.com/%E0%B2%85%E0%B2%A8%E0%B3%8D%E0%B2%AF%E0%B2%BE%E0%B2%AF%E0%B2%95%E0%B3%8D%E0%B2%95%E0%B3%86-%E0%B2%AC%E0%B2%BE%E0%B2%97%E0%B2%A6-%E0%B2%9B%E0%B2%BE%E0%B2%A4%E0%B2%BF%E0%B2%B5%E0%B2%82%E0%B2%A4/

‘ಪತ್ನಿಯರು ಕಂಡಂತೆ ಪ್ರಸಿದ್ಧರು’ ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯ. ಪುಸ್ತಕ ಖರೀದಿಗೆ ಲಿಂಕ್:
https://prajodaya.myinstamojo.com/product/patniyaru-kandante-prasiddaru

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಕೊರೊನಾ ಹರಡದಂತೆ 2020 ರಲ್ಲಿ ಹೇರಲಾದ ದೇಶವ್ಯಾಪಿ ಲಾಕ್‌ಡೌನ್, ಲಕ್ಷಾಂತರ ವಲಸೆ ಕಾರ್ಮಿಕರು ಕೆಲಸ, ಆಹಾರ ಮತ್ತು ಆಶ್ರಯವಿಲ್ಲದೆ ಅತಂತ್ರರಾಗುವ ...
13/09/2026

ಕೊರೊನಾ ಹರಡದಂತೆ 2020 ರಲ್ಲಿ ಹೇರಲಾದ ದೇಶವ್ಯಾಪಿ ಲಾಕ್‌ಡೌನ್, ಲಕ್ಷಾಂತರ ವಲಸೆ ಕಾರ್ಮಿಕರು ಕೆಲಸ, ಆಹಾರ ಮತ್ತು ಆಶ್ರಯವಿಲ್ಲದೆ ಅತಂತ್ರರಾಗುವ ಸನ್ನಿವೇಶ ನಿರ್ಮಾಣವಾಗಲು ಕಾರಣವಾಯಿತು. ಅಸಹಾಯಕರಾದ ಕಾರ್ಮಿಕರು ಹೇಗಾದರೂ ಸರಿ ಮನೆ ತಲುಪಬೇಕೆಂದು ನಡೆದುಕೊಂಡು, ಸೈಕಲ್ ತುಳಿಯುತ್ತ ಊರುಗಳ ಹಾದಿ ಹಿಡಿದರು.

ರಿತೇಶ್, ಆಶೀಶ್, ರಾಮ್‌ಬಾಬು, ಸೋನು, ಕೃಷ್ಣ, ಸಂದೀಪ್ ಮತ್ತು ಮುಕೇಶ್ ಬಿಹಾರ ಮೂಲದ ವಲಸೆ ಕಾರ್ಮಿಕರು. ಇತರರ ಹಾಗೆ ಇವರೂ ಕೂಡ ತಮ್ಮ ಬೈಸಿಕಲ್‌ಗಳಲ್ಲಿ ಊರು ತಲುಪಲು ಹೋದರು. ಏಳು ದಿನಗಳ ಕಾಲ ಪೊಲೀಸರು ಹಾಗೂ ಆಡಳಿತ ವ್ಯವಸ್ಥೆಯ ಕೌರ್ಯ, ಹಸಿವು, ಅವಮಾನ, ಹತಾಶೆ ಎಲ್ಲವನ್ನೂ ಎದುರಿಸಿಯೂ ತಮ್ಮ ಗುರಿ ಮುಟ್ಟುವಲ್ಲಿ ಯಶಸ್ವಿಯಾದರು. ದೆಹಲಿ ಸಮೀಪದ ಗಾಜಿಯಾಬಾದ್‌ನಿಂದ ಶುರುವಾದ ಈ ಪ್ರಯಾಣ ಕೊನೆಗೊಳ್ಳುವುದು ಬಿಹಾರದ ಸಹರ್ಸಾದಲ್ಲಿ. ಈ ಏಳು ಮಂದಿ ತಮ್ಮ ಪ್ರಯಾಣದ ವೇಳೆ ಅನುಭವಿಸಿದ ಸವಾಲುಗಳನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ನಿರ್ದೇಶಕ ವಿನೋದ್ ಕಾಪ್ರಿ ತಮ್ಮ '1232 km: The Long Journey Home' ಕೃತಿಯಲ್ಲಿ ಕಟ್ಟಿಕೊಟ್ಟಿದ್ದರು.

ನಮ್ಮೊಡನೆ ಇದ್ದರೂ ನಾವೆಂದೂ ಅರಿಯಲು ಬಯಸದ ವಲಸೆ ಕಾರ್ಮಿಕರೆಂಬ ಮನುಷ್ಯ ಜೀವಿಗಳ ಬದುಕನ್ನು, ನಮ್ಮ ಹೊಣೆಗೇಡಿತನವನ್ನು ನಮಗೆ ಪರಿಚಯಿಸುವ '1232 ಕಿ.ಮೀ.' ಕೃತಿ ಎಲ್ಲರೂ ಓದಲೇಬೇಕಿರುವ ಪುಸ್ತಕ. ಸತೀಶ್ ಜಿ. ಟಿ. ಪುಸ್ತಕವನ್ನು ಅನುವಾದಿಸಿದ್ದಾರೆ.

* * *

'1232 ಕಿ.ಮೀ.' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://prajodaya.myinstamojo.com/product/1232km

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಅಗ್ರಹಾರ ಕೃಷ್ಣಮೂರ್ತಿ ಅವರ 'ನೀರು ಮತ್ತು ಪ್ರೀತಿ' ಕಾದಂಬರಿ ಕುರಿತು ಗುರುಪ್ರಸಾದ್ ಕಂಟಲಗೆರೆ ಅವರ ಅನಿಸಿಕೆ...ಅಗ್ರಹಾರರ 'ನೀರು ಮತ್ತು ಪ್ರೀತ...
13/09/2026

ಅಗ್ರಹಾರ ಕೃಷ್ಣಮೂರ್ತಿ ಅವರ 'ನೀರು ಮತ್ತು ಪ್ರೀತಿ' ಕಾದಂಬರಿ ಕುರಿತು ಗುರುಪ್ರಸಾದ್ ಕಂಟಲಗೆರೆ ಅವರ ಅನಿಸಿಕೆ...

ಅಗ್ರಹಾರರ 'ನೀರು ಮತ್ತು ಪ್ರೀತಿ' ಕುಡಿದಾಗ...........................................

ಬಹಳ ದಿನಗಳಿಂದ ಕಾತರಿಸಿದ್ದ ಅಗ್ರಹಾರ ಕೃಷ್ಣಮೂರ್ತಿಯವರ 'ನೀರು ಮತ್ತು ಪ್ರೀತಿ' ಕಾದಂಬರಿ ಮರುಮುದ್ರಣಗೊಂಡು ಈಗಿನ ಓದುಗರಿಗೂ ಸಿಕ್ಕುವಂತಾಗಿದೆ. ಅಹರ್ನಿಶಿ ಪ್ರಕಾಶನ ಈ ಸಾರ್ಥಕ ಕೆಲಸ ಮಾಡಿದೆ.

'ನೀರು ಮತ್ತು ಪ್ರೀತಿ' ಕೈಗೆ ಸಿಕ್ಕ ತಕ್ಷಣ ಇದರ ಬಗ್ಗೆ ಹಿಂದಿನಿಂದಲೂ ಕೇಳಿ ಬಾಯಾರಿದ್ದ ನಾ ಕೂತಲ್ಲಿ ನಿಂತಲ್ಲೆ ಬಿಡದೆ ಒಂದೇ ಗುಕ್ಕಿಗೆ ಕುಡಿದು ಬಿಟ್ಟೆ!

ಸರಳವಾದ ವಸ್ತು ಒಂದನ್ನ ಅದೆಷ್ಟು ಮೋಹಕವಾಗಿ ಕಟ್ಟಿದ್ದಾರೆ. ಆ ಕಾಲಕ್ಕೆ ಏಕೆ ಈ ಕಾಲಕ್ಕೂ ಇದು ಕೆಂಪು ಗುಲಾಬಿಯೇ ಸರಿ.

ಮುಟ್ಟಿನಿಂದ ಶುರುವಾಗುವ ಕಾದಂಬರಿಯ ಮೊದಲ ಸಾಲುಗಳೆ.. ಓದುಗನನ್ನು ಸಮ್ಮೋಹಿಸಿ ಕೊನೆಯವರೆಗೂ ಹಿಡಿದಿಟ್ಟುಕೊಂಡು ಬಿಡುತ್ತವೆ.

ಹದಿಹರೆಯದವರ ತವಕ ತಲ್ಲಣಗಳು ಹೇಗಿರುತ್ತವೆ ಅಂದರೆ ಆ ಕ್ಷಣಕ್ಕೆ ಭವಿಷ್ಯದ ಕಲ್ಪನೆಗಳು, ಚಿಂತೆಗಳು ಸುಳಿಯುವುದೇ ಇಲ್ಲ. 'ನೀರು ಮತ್ತು ಪ್ರೀತಿ'ಯೂ ಸಹ ಆರಂಭದಲ್ಲಿ ಅದನ್ನ ಹಾಗೇ ನಿರ್ವಹಿಸಿದೆ. "ಗೆಳೆಯರೆ ಓ ನನ್ನ ಗೆಳತಿಯರೆ" ಎಂಬ ಪ್ರೇಮಲೋಕದ ಹಾಡಿನಂತೆ.. ಯುವ ಜೋಡಿಗಳು ನಾವು ಪ್ರೀತಿಸುತ್ತಿದ್ದೇವಾ ಎಂಬುದರ ಖಾತ್ರಿಗೂ ಮುನ್ನವೆ ಸುಖಿಸುತ್ತ ಎಂಜಾಯ್ ಮಾಡುತ್ತಾರೆ. ಕಾದಂಬರಿಯ ಓಟ ಅಷ್ಟು ಫ್ರೆಷ್ ಆಗಿದೆ.

ಆ ಕಾಲದ ಕಾಲೇಜು ಓದಿನ ವಿವರಣೆಯಂತೂ ಯತಾವತ್ ಮೂಡಿ ಬಂದಿದೆ. ಲೆಕ್ಚೆರರ್ ಮಾತಿಗೊಂದಾವರ್ತಿ ಬಳಸುವ "ಯುಸಿ"ಗಳು, ಇತರೆ ವಿಷಯದ ವಿದ್ಯಾರ್ಥಿ ತಮ್ಮ ಕ್ಲಾಸ್ ಕೇಳಲು ಬಂದಾಗ ಮುದಗೊಳ್ಳುವುದು ಇದೆಲ್ಲೆವೂ ಆ ಕಾಲದ, ಈ ಕಾಲದ ಎಲ್ಲ ಕಾಲದ ಹುಡುಗ ಹುಡುಗಿಯರಿಗೆ ದಕ್ಕಿದ ಅನುಭವದಂತೆಯೇ ಇದ್ದು, ಇದನ್ನೆಲ್ಲ ಕಂಡುಂಡೆ ಬರೆದಂತಿದೆ.

ಬಹುಶಃ ಈ ಕಾದಂಬರಿ ಬಂದಾಗ ಹಲವರು ತಮ್ಮ ಬೆನ್ನು ಮುಟ್ಟಿಕೊಂಡಿರಬಹುದು.. ಅದು ಜಲಜ ಮತ್ತು ಗೋಪಾಲರಂತಹವರ ಸ್ಪೀಡ್ ಪ್ರೀತಿಯ ಕಾರಣದಿಂದಲೂ ಇರಬಹುದು.. ಇಲ್ಲವೆ ವಿದ್ಯಾರ್ಥಿ ಕೆಣಕಿ ಕಪಾಳಮೋಕ್ಷ ಪಡೆದ ಲೆಕ್ಚರ್ ನಂತವರಿಂದಾಗಿಯೂ.. ಇಲ್ಲವೆ ರಜೆ ಮುಗಿಸಿ ಬರುವಾಗ ಕಾಲುಂಗರ ತೊಟ್ಟು ಬಂದ ಹುಡುಗಿಯರ ಕಾರಣಕ್ಕೂ ಇರಬಹುದು..

ಈ ಕಾದಂಬರಿಯುದ್ದಕ್ಕೂ ನೀರು ವಹಿಸಿರುವ ಪಾತ್ರ, ಅದನ್ನು ಪೋಷಿಸಿರುವ ಬಗೆ, ಅದು ಪ್ರೀತಿಯೊಂದಿಗೆ ತಳುಕು ಹಾಕಿಕೊಂಡಿರುವುದು.. ಇದೆಲ್ಲವೂ ಇನ್ನೆಲ್ಲೂ ಸಿಗದ ಅಪರೂಪದ ವಸ್ತು ಮತ್ತು ಬೆಸುಗೆ ಎನಿಸಿಬಿಡುತ್ತದೆ. ಮುಟ್ಟಿನೊಂದಿಗೆ ಶುರುವಾಗುವ ಕಾದಂಬರಿ ಬಾಯಿ ವಾಸನೆಯೊಂದಿಗೆ ಕೊನೆಗೊಳ್ಳುತ್ತೆ. ಸರಳ ಎನಿಸುವ ಸಂಗತಿಗಳೆರೆಡು ಹಬ್ಬುವ, ನಿರ್ಣಾಯಕವಾಗುವ ಪರಿ ಸೋಜಿಗವೆನಿಸುತ್ತೆ. 'ಮುಟ್ಟು' ಮತ್ತು 'ವಾಸನೆ' ಕಾದಂಬರಿಯ ಎರಡು ತುದಿಗಳು. ಇವೆರಡೂ ಜೀವ ತಳೆಯುವ ಪರಿ ಅನನ್ಯ.

ಕಾದಂಬರಿ ತನ್ನ ನೈಜ ವಿವರಣೆಗಳಿಂದಾಗಿ ಎಲ್ಲೂ ಸಹ ಅವಾಸ್ತವ ಎನಿಸುವುದಿಲ್ಲ. ಓದುಗನ ಅನುಭವದ ಮೂಸೆಯಲ್ಲೆ ಇಲ್ಲೇ ಎಲ್ಲೋ ನಡೆದಂತಿದೆ.

ಓದಲು ನಗರಕ್ಕೆ ಬಂದ ಹುಡುಗಿ ಪ್ರೀತಿಯ ನೀರಿಗೆ ಬಿದ್ದು ಕನ್ಯತ್ವ ಕಳೆದುಕೊಳ್ಳುವುದು, ಇದರ ಸುಳಿವರಿತ ಅಪ್ಪ ಓದು ಬಿಡಿಸಿ ಮದುವೆ ಮಾಡುವುದು, ಆಕೆ ಗಂಡನಲ್ಲಿ ಸಂತೋಷ ಕಾಣಲಾಗದೆ ಹಳೆ ಪ್ರಿಯಕರನನ್ನೆ ಹುಡುಕಿ ಬರುವುದು.. ಈ ಸರಳ ಸೂತ್ರವೇ ಇಲ್ಲೂ ಇದ್ದರೂ 'ನೀರು ಮತ್ತು ಪ್ರೀತಿ' ಮುಖ್ಯ ಎನಿಸುವುದು‌.. ಆ ತಿರುವುಗಳ ಮಧ್ಯೆ ಅನುಭವಿಸುವ ತುಮುಲಗಳ ವ್ಯವಧಾನ ಪೂರಿತ ನಿರ್ವಹಣೆಯಿಂದ.

ಎಲ್ಲೂ ಎಲ್ಲೆ ಮೀರದೆ ಅದರ ಇನ್ನಿತರ ಆಯಾಮಗಳೆಡೆಗೆ ಸಂಚರಿಸಿ ಒಂದು ಸಾಮಾಜಿಕ ಕಟು ವಾಸ್ತವತೆಯನ್ನ ತೆರೆದಿಡುತ್ತದೆ.

'ನೀರು ಮತ್ತು ಪ್ರೀತಿ'ಯ ಶುರುವಿನಿಂದ ಕೊನೆಯವರೆಗೂ ನನ್ನನ್ನು ಕಾಡಿದ ಸಂಗತಿ ಎಂದರೆ, ಆ ಕಾಲದ ಸಿನಿಮಾಸಕ್ತರಿಗೆ ಈ ಕತೆ ಸಿಗಲಿಲ್ಲವೆ? ಸಿಕ್ಕಿದ್ದರೆ ಅವರಿಗೆ ತಕ್ಕನಾದ ಎಲ್ಲವೂ ಇಲ್ಲಿತ್ತು.

ಇನ್ನೊಮ್ಮೆ ಅನಿಸಿದ್ದು, ಅವರಿಗೆ ಸಿಗದಿದ್ದೆ ಒಳ್ಳೆಯದಾಯಿತೇನೊ.. ಸಿಕ್ಕಿದ್ದರೆ ಇನ್ನಷ್ಟು ಮಸಾಲೆ ಬೆರೆಸಿ ಇದನ್ನೊಂದು ಮತ್ತೊಂದು 'ಅನುಭವ' ಮಾಡಿಬಿಡುತ್ತಿದ್ದರೇನೊ..

ಈ ಸೂಕ್ಷ್ಮವನ್ನು ಬಿಡಿಸಿ ಅದನ್ನೊಂದು ಸೃಜನಶೀಲ, ಎಲ್ಲ ಕಾಲಕ್ಕೂ ಸಲ್ಲುವ ಕಾದಂಬರಿಯನ್ನಾಗಿಸುವ ಅಗಾಧ ಶಕ್ತಿ ನಾನು ಗೌರವಿಸುವ ಕನ್ನಡದ ಮಹತ್ವದ ಲೇಖಕ ಅಗ್ರಹಾರರಿಗಷ್ಟೆ ಸಾಧ್ಯ!

- ಗುರುಪ್ರಸಾದ್ ಕಂಟಲಗೆರೆ

13-9-2020

* * *

'ನೀರು ಮತ್ತು ಪ್ರೀತಿ' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://prajodaya.myinstamojo.com/product/neeru-mattu-preeti

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಚನ್ನಪ್ಪ ಕಟ್ಟಿ ಅವರ ಸಮಗ್ರ ಕಥೆಗಳ ಸಂಕಲನ 'ಕಥಾ ಕಿನ್ನುರಿ' ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯ. ಪುಸ್ತಕ ಖರೀದಿಸಲು ಲಿಂಕ್:https:...
12/09/2026

ಚನ್ನಪ್ಪ ಕಟ್ಟಿ ಅವರ ಸಮಗ್ರ ಕಥೆಗಳ ಸಂಕಲನ 'ಕಥಾ ಕಿನ್ನುರಿ' ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯ.

ಪುಸ್ತಕ ಖರೀದಿಸಲು ಲಿಂಕ್:
https://prajodaya.myinstamojo.com/product/-d3c0b

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಟಿ ಎಸ್ ಗೊರವರ ಅವರ 'ಹಸಿರು ಟಾವೆಲ್' (ರೈತನೊಬ್ಬನ ಜೀವನ ಕಥನ) ಕೃತಿ ಕುರಿತು ವಾರ್ತಾಭಾರತಿಯಲ್ಲಿ ಪ್ರಕಟವಾಗಿದ್ದ ವಿನಯಾ ಒಕ್ಕುಂದ ಅವರ ಟಿಪ್ಪಣಿ...
12/09/2026

ಟಿ ಎಸ್ ಗೊರವರ ಅವರ 'ಹಸಿರು ಟಾವೆಲ್' (ರೈತನೊಬ್ಬನ ಜೀವನ ಕಥನ) ಕೃತಿ ಕುರಿತು ವಾರ್ತಾಭಾರತಿಯಲ್ಲಿ ಪ್ರಕಟವಾಗಿದ್ದ ವಿನಯಾ ಒಕ್ಕುಂದ ಅವರ ಟಿಪ್ಪಣಿ...

ಸಂಗಾತ ಪುಸ್ತಕ ಪ್ರಕಟಿಸಿರುವ 'ಹಸಿರು ಟಾವೆಲ್' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://prajodaya.myinstamojo.com/product/-ffdb8

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಡಿ.ಉಮಾಪತಿ ಅವರು ಅನುವಾದಿಸಿರುವ ನಿಯಾಝ್ ಫಾರೂಕಿ ಅವರ ‘An Ordinary Man’s Guide to Radicalism- Growing up Muslim in India’ ಕೃತಿಯ ...
12/09/2026

ಡಿ.ಉಮಾಪತಿ ಅವರು ಅನುವಾದಿಸಿರುವ ನಿಯಾಝ್ ಫಾರೂಕಿ ಅವರ ‘An Ordinary Man’s Guide to Radicalism- Growing up Muslim in India’ ಕೃತಿಯ ಕನ್ನಡ ಅನುವಾದ 'ಪದ ಕುಸಿಯೆ ನೆಲವಿಲ್ಲ' ಕುರಿತು ಸಿ.ಎಸ್.ದ್ವಾರಕಾನಾಥ್ ಅವರ ಅನಿಸಿಕೆ...

* * *

ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆಯಿಂದಾಗಿ ಸಾಕಷ್ಟು disturb ಆಗಿದ್ದ ನನ್ನನ್ನು ಅಲ್ಲಿನ ಬಡ ಮುಸ್ಲಿಂ ಕುಟುಂಬಗಳ ಅಸಹಾಯಕತೆಯೂ ಸಾಕಷ್ಟು ಕಾಡಿತ್ತು. ಅಲ್ಲಿ ಗಲಭೆಯಲ್ಲಿ ತೊಡಗಿರದ ಅಮಾಯಕ ಮುಸ್ಲಿಮರ ಬಗ್ಗೆ ಮಾತನಾಡಿದರೂ ಮತಾಂಧ ಮಾಧ್ಯಮಗಳು ನಮ್ಮಂತಹವರನ್ನು ಗಲಭೆಕೋರರಿಗೆ ಬೆಂಬಲಿಸುತಿದ್ದೇವೆಂಬಂತೆ ಬಣ್ಣಿಸಲು ಹಾತೊರೆಯುತಿದ್ದವು! ಈ ಎಲ್ಲಾ ಗೊಂದಲಗಳ ನಡುವೆ ನನ್ನ ಆಲೋಚನೆಗಳಿಗೆ ಒಂದು ಮೂರ್ತ ರೂಪ ಕೊಡಲು ಹೆಣಗಾಡುತ್ತಿದ್ದೆ. All india milli council ಪ್ರಕಟಿಸಿರುವ scapegoat ಪುಸ್ತಕವನ್ನು ಮತ್ತೆ ಮತ್ತೆ ತಿರುವಿ ಹಾಕುತ್ತಿದ್ದೆ. ಈ ಸಂದರ್ಭದಲ್ಲಿ 'ಪದ ಕುಸಿಯೆ ನೆಲವಿಲ್ಲ' ನನ್ನ ಕೈ ಸೇರಿತ್ತು.

ಓದಲು ಅನೇಕ ಪುಸ್ತಕಗಳ ಪಟ್ಟಿ ಇಟ್ಟುಕೊಂಡು "ಯಾವುದು ಮೊದಲು? ಯಾವುದು ನಂತರ?" ಎಂದು ಯೋಚಿಸುತ್ತಿದ್ದವನಿಗೆ ನಿಯಾಝ್ ಫಾರೂಕಿಯ ಈ ಪುಸ್ತಕ ನನ್ನ ಪಟ್ಟಿಯನ್ನು ಹೊರತುಪಡಿಸಿ ಓದಬೇಕೆನಿಸಿ ಒಂದೇ ಉಸುರಿಗೆ ಓದಿ ಮುಗಿಸಿದೆ!

ನಿಜಕ್ಕೂ ನನ್ನ ಭಾವನೆಗಳಿಗೆ ಇಲ್ಲಿ ಅಕ್ಷರಗಳು ದೊರೆತವು. ಮುಸ್ಲಿಂ ಹುಡುಗನೊಬ್ಬನ ಅಸ್ಥಿರತೆ, ಅಸಹಾಯಕತೆಗಳು, ಪರಕೀಯತೆಗಳು, ಅವನ ಅಸ್ಮಿತೆಯನ್ನು ಕಟ್ಟಿಕೊಳ್ಳಲು ಆತ ಪಡುವ ಪಡಿಪಾಟಲುಗಳು, ಜಾಮಿಯಾ ಏರಿಯಾದಲ್ಲಿನ ಹೀನ ಬದುಕು, ಬವಣೆ ಎಲ್ಲವೂ ನನ್ನನ್ನು ಅಲ್ಲಾಡಿಸಿಬಿಟ್ಟವು. ಈಗಿನ‌ ಸಂದರ್ಭದಲ್ಲಿ ಪ್ರತಿಯೊಬ್ಬ ಪತ್ರಕರ್ತನೂ ಓದಲೇಬೇಕಾದ ಪುಸ್ತಕವಿದು. ಇದನ್ನು ಓದಿದವರು ನಮ್ಮ ದೃಶ್ಯ ಮಾಧ್ಯಮದ ಆ್ಯಂಕರ್ ಗಳಂತೆ ಪೂರ್ವಾಗ್ರಹಪೀಡಿತರಾಗಿ ಅಮಾನುಷರಾಗಲಾರರು!

ಅನುವಾದದ ಭಾಷೆ ಎಷ್ಟು ಸುಲಲಿತವಾಗಿದೆಯೆಂದರೆ ಪುಸ್ತಕ ಎತ್ತಿಕೊಂಡವರಿಗೆ ಇಡಲು ಮನಸ್ಸು ಬರಲ್ಲ! ಎಲ್ಲೂ ಅನುವಾದ ಎನಿಸದಷ್ಟು ಸುಂದರವಾಗಿ ಉಮಾಪತಿಯವರು ಅನುವಾದಿಸಿದ್ದಾರೆ. ಇನ್ನೂ ಬಹಳಷ್ಟು ಕಾಲ ಈ ಗುಂಗಿನಲ್ಲಿರುತ್ತೇನೆ ಅನಿಸುತ್ತಿದೆ. ಈ ಸಂದರ್ಭಕ್ಕಂತೂ ಈ ಪುಸ್ತಕ ಸಾಂದರ್ಭಿಕ ಮತ್ತು ಅತ್ಯವಶ್ಯಕ.

- ಸಿ.ಎಸ್.ದ್ವಾರಕಾನಾಥ್

12-9-2020

* * *

ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ 'ಪದ ಕುಸಿಯೆ ನೆಲವಿಲ್ಲ' ಕೃತಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಪುಸ್ತಕ ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://prajodaya.myinstamojo.com/product/3358316/-ca8a8

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಕಾವೇರಿ ಎಸ್ ಎಸ್ ಅವರ 'ಒಡಲ ಖಾಲಿ ಪುಟ' ಪುಸ್ತಕ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯ.ಏಕಕಾಲಕ್ಕೆ ನಗು ಮತ್ತು ವಿಷಾದ ಎರಡನ್ನೂ ದಾಟಿಸ...
11/09/2026

ಕಾವೇರಿ ಎಸ್ ಎಸ್ ಅವರ 'ಒಡಲ ಖಾಲಿ ಪುಟ' ಪುಸ್ತಕ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯ.

ಏಕಕಾಲಕ್ಕೆ ನಗು ಮತ್ತು ವಿಷಾದ ಎರಡನ್ನೂ ದಾಟಿಸಬಲ್ಲ ಕಸುವು ಇಲ್ಲಿನ ಬರಹಗಳಲ್ಲಿದೆ. ಅಂಗನವಾಡಿ, ಸರ್ಕಾರಿ ಶಾಲೆಯಲ್ಲಿ ಅಕ್ಷರ ಜ್ಞಾನ ದಕ್ಕಿಸಿಕೊಳ್ಳುವ ಮಕ್ಕಳ ಭಾವಲೋಕವನ್ನು ಇಲ್ಲಿನ ಕೆಲ ಪ್ರಬಂಧಗಳಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಇಲ್ಲಗಳ ನಡುವೆಯೂ ಸಂಭ್ರಮಿಸುವ ಬದುಕಿನ ಚಿತ್ರಗಳು ಆಪ್ತವಾಗಿವೆ.

ಮೀಸಲಾತಿ, ಮುಟ್ಟು-ಮೈಲಿಗೆ, ಶಿಕ್ಷಣ, ಕೃಷಿ ಕುರಿತ ಲೇಖನಗಳೂ ಇವೆ. ಮಾಧ್ಯಮ ಮತ್ತು ಮಹಿಳೆ ಪ್ರಬಂಧ ಮಾಧ್ಯಮ ಕ್ಷೇತ್ರದಲ್ಲಿ ಮಹಿಳೆ ಎದುರಿಸಬೇಕಿರುವ ಸವಾಲುಗಳು, ಅಪಸವ್ಯಗಳ ಕುರಿತು ಗಮನ ಸೆಳೆಯುತ್ತದೆ. ತಮಗಾದ ಅನುಭವಗಳ ಮೂಲಕವೇ ಸುದ್ದಿಮನೆಯಲ್ಲಿ ಪತ್ರಕರ್ತೆಯರಿಗೆ ಎದುರಾಗುವ ಸನ್ನಿವೇಶಗಳನ್ನು ಚಿತ್ರಿಸಿದ್ದಾರೆ.

ಪುಸ್ತಕ ಖರೀದಿಗೆ ಲಿಂಕ್:
https://prajodaya.myinstamojo.com/product/-a266f

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಲೋಕೇಶ ಅಗಸನಕಟ್ಟೆ ಅವರ 'ವೈಷ್ಣವ ಜನತೋ' ಕಾದಂಬರಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಕೊಳ್ಳಲು ಕೆಳಗಿನ ಲಿಂಕ್ ಕ್...
11/09/2026

ಲೋಕೇಶ ಅಗಸನಕಟ್ಟೆ ಅವರ 'ವೈಷ್ಣವ ಜನತೋ' ಕಾದಂಬರಿ ಪ್ರಜೋದಯ ಪ್ರಕಾಶನದ Online Storeನಲ್ಲಿ ಲಭ್ಯವಿದ್ದು, ಆಸಕ್ತರು ಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://prajodaya.myinstamojo.com/product/-0896a

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಭಾರತೀದೇವಿ ಅವರ 'ಚಲಿಸುತ್ತಿವೆ ಚುಕ್ಕಿಗಳು' ಪುಸ್ತಕದಲ್ಲಿರುವ ಕವಿತೆ ನಿಮ್ಮ ಓದಿಗೆ...ಅವಳಿಗೆ ನಗಲು ಅನುಮತಿ ಇಲ್ಲ, ಅಳಲು ಕಣ್ಣೀರಿಲ್ಲ-------...
11/09/2026

ಭಾರತೀದೇವಿ ಅವರ 'ಚಲಿಸುತ್ತಿವೆ ಚುಕ್ಕಿಗಳು' ಪುಸ್ತಕದಲ್ಲಿರುವ ಕವಿತೆ ನಿಮ್ಮ ಓದಿಗೆ...

ಅವಳಿಗೆ ನಗಲು ಅನುಮತಿ ಇಲ್ಲ, ಅಳಲು ಕಣ್ಣೀರಿಲ್ಲ
-----------------------------------------------

ನೇತ್ರಾವತಿಯ ನಗು ಬಂಡೆಗಳಿಗೆ ಬಡಿದೂ ಬಡಿದೂ
ಕೊನೆಗೊಮ್ಮೆ ಚಿಂದಿಯಾಗಿ ಇಲ್ಲವಾಯಿತು
ಅವಳು ಕಣ್ಣೀರು ಹರಿಸಿ ಹರಿಸಿ
ಬತ್ತಿ ಹೋಗಿದ್ದಾಳೆ
ಅವಳ ಬೋಳು ಬಂಡೆಗಳ ಸಹಜ ಬತ್ತಲೆಗೆ
ಕೇಸರಿ ಬಟ್ಟೆ ಹೊದೆಸಲಾಗಿದೆ
ನೇತ್ರಾವತಿಯ ತುಂಬಾ ಬಂಡೆಗಳು
ಅಲ್ಲಿ ಯಾವುದೂ ಸುರಳೀತ ಹರಿದು ಹೋಗುವುದಿಲ್ಲ

ಅವಳ ಮಕ್ಕಳು ಜೊತೆಗೆ ಕಿಲಿಕಿಲಿ ನಗುವಾಗ
ಕತ್ತಿ, ದೊಣ್ಣೆ, ಚೂರಿ ಹಿಡಿದ ‘ಅವರು’ ಬರುತ್ತಾರೆ
ನೇತ್ರಾವತಿ ಬೆಚ್ಚಿ ‘ಮಗಳನ್ನು’ ಚಿಂದಿ ಸೀರೆಯಡಿ
ಅಡಗಿಸಿ ಅತ್ತಿತ್ತ ನೋಡುತ್ತಾಳೆ
ಬೋಳು ಬಂಡೆಗಳಿಗೆ ಅಮರಿಕೊಂಡ ಬೇಲಿ
ಅವಳು ಹರಿದಲ್ಲೆಲ್ಲ ತೊಡರಿಕೊಳ್ಳುತ್ತದೆ

ಅವಳೂರ ಯಾವ ಬಸ್ಸುಗಳೂ ಈಗ
ನಗು, ಮಾತುಗಳಿಂದ ಗಿಜಿಗುಡುವುದಿಲ್ಲ
ಅವಳೂರ ಅಂಗಡಿ ಕಟ್ಟೆಗಳಲ್ಲಿ ಈಗ
ಉಲ್ಲಾಸದ ಕಲರವವಿಲ್ಲ
ಜತೆಗೆ ಕುಳಿತವನ ಕಣ್ಣಲ್ಲೇ ಇರಿದು, ಮಹಜರು ಮಾಡಿ
ಓಂಕಾರ ಉರುಳಾಗಿ, ಅರ್ಧಚಂದ್ರ ಕತ್ತಿಯಾಗಿ, ಶಿಲುಬೆ ಬಡಿಗೆಯಾಗಿ
ಎಲ್ಲೆಲ್ಲೂ ಹಸಿ ಹಸಿ ವಾಸನೆ
ಈಗೀಗ ಮಳೆಗಾಲ ಕಳೆದರೂ
ನೇತ್ರಾವತಿಯ ಕೆಂಪುನೀರು ತಿಳಿಯಾಗುತ್ತಿಲ್ಲ

ಎಲ್ಲರಿಗೂ ಜನ್ಮ ನೀಡಿ ಮಡಿಲಲ್ಲಿ ಸಾಕಿ ಸಲಹಿ ಪೊರೆದ
ತಾಯಿಯ ಒಡಲೆಲ್ಲ ಹುಣ್ಣಾಗಿ, ಕೀವು ತುಂಬಿ
ಒಂದೇ ಮಗ್ಗುಲು ಸಾಕಾಗಿ, ಹೊರಳಲು ಯತ್ನಿಸುತ್ತಾಳೆ
ನೆಲಕ್ಕಂಟಿದ ಆಕೆಗೆ ಹೊರಳುವುದೂ ಸುಲಭವಲ್ಲ
ತನ್ನ ಮೈಗಂಟಿದ ಈ ಕಲೆಯನ್ನೆಲ್ಲ ಕಳೆಯುವುದು ಹೇಗೆ?
ದುರ್ಗಂಧ ತೊಳೆಯುವುದು ಹೇಗೆ?
ತುಂಬಿ ಭೋರ್ಗರೆದು ಎಲ್ಲವನ್ನೂ ಅಮರಿಕೊಳಲೇ?
ಬತ್ತಿ, ಬೇಯುತ್ತಿರುವ ತಾಯಿ ನೇತ್ರಾವತಿಗೀಗ
ಮುಂಗಾರಿನದೇ ಧ್ಯಾನ...

ಪುಟ ೧೨-೧೩

* * *

ಆಸಕ್ತರು 'ಚಲಿಸುತ್ತಿವೆ ಚುಕ್ಕಿಗಳು' ಪುಸ್ತಕ ಖರೀದಿಸಲು ಕೆಳಗಿನ ಲಿಂಕ್ ಕ್ಲಿಕ್ಕಿಸಬಹುದು...
https://prajodaya.myinstamojo.com/product/clisuttive-cukkigllu-kvn-snkln

ಆನ್ಲೈನ್ ಖರೀದಿ ಸಾಧ್ಯವಾಗದಿದ್ದರೆ ಸಂಪರ್ಕಿಸಿ: 8792276742

ಕಲಾವಿದೆ ಶಾಂತಾ ಹುಬಳೀಕರ ಅವರ ಆತ್ಮಚರಿತ್ರೆ 'ನಾಳೀನ ಚಿಂತ್ಯಾಕ' ಪುಸ್ತಕದ ಕುರಿತು ಮಂಗಳ ಅವರ ಅನಿಸಿಕೆ...* * *"ನನ್ನ ಕೈಯಲ್ಲಿ ಕಾಯಿದೆಯ ಅಧಿಕ...
10/09/2026

ಕಲಾವಿದೆ ಶಾಂತಾ ಹುಬಳೀಕರ ಅವರ ಆತ್ಮಚರಿತ್ರೆ 'ನಾಳೀನ ಚಿಂತ್ಯಾಕ' ಪುಸ್ತಕದ ಕುರಿತು ಮಂಗಳ ಅವರ ಅನಿಸಿಕೆ...

* * *

"ನನ್ನ ಕೈಯಲ್ಲಿ ಕಾಯಿದೆಯ ಅಧಿಕಾರ ಇದ್ದಿದ್ದರೆ, ಮನೆಯಲ್ಲಿಯೇ ದರೋಡೆ ಮಾಡಿ ಪತ್ನಿಯನ್ನು ದರಿದ್ರಳನ್ನಾಗಿ ಮಾಡಿ ರಸ್ತೆಗೆ ಎಳೆದ ಈ ದರೋಡೆಕೋರನಿಗೆ ನಾನು ಆನೆ ಕಾಲಿನ ಬುಡಕ್ಕೆ ಕೆಡವುತ್ತಿದ್ದೆ". ತನ್ನ ಗಂಡನ ಬಗ್ಗೆ ಇಷ್ಟು ನಿಷ್ಠುರವಾಗಿ ಮತ್ತು ಕಟುವಾಗಿ ಹೇಳಿದ ಶಾಂತಾರವರು ಎಷ್ಟು ನೊಂದಿರಬಹುದೆಂದು ಊಹಿಸಬಹುದು.

ಹುಟ್ಟಿನಿಂದ ಹಿಡಿದು ಸಾಯುವ ತನಕ ತಮ್ಮ ಇಡೀ ಬದುಕು ದುರಂತದಿಂದ ತುಂಬಿದ್ದರೂ ಆತ್ಮಹತ್ಯೆ ಮಾಡಿಕೊಳ್ಳದೆ, ಅವರು ಬದುಕನ್ನು ಎದುರಿಸಿದ ರೀತಿ ಮಾದರಿ.

ಬದುಕಿದ್ದಾಗ ಮೂರು ಹೊತ್ತಿನ ಊಟ ಹಾಕದ ಮಕ್ಕಳು ಸತ್ತಾಗ ಅಂತ್ಯ ಸಂಸ್ಕಾರ ಮಾಡಿ, ತಮ್ಮ ಜನ್ಮಕ್ಕೆ ಮುಕ್ತಿ ನೀಡಲಿ ಎಂದು ಬಯಸುವ ತಂದೆ ತಾಯಿಯರಿದ್ದಾರೆ. ಆದರೆ ಶಾಂತಾರವರು, ತನ್ನ ಶವವನ್ನು ತನ್ನ ಮಗ ಮುಟ್ಟಬಾರದೆಂದು, ಆಸ್ಪತ್ರೆಗೆ ದೇಹದಾನ ಮಾಡುವ ಉಯಿಲು ಬರೆದಿಟ್ಟು ತೀರಿಕೊಳ್ಳುತ್ತಾರೆಂದು ಓದಿ, ಅವರ ಬಗ್ಗೆ ಅಭಿಮಾನ ಇನ್ನೂ ಜಾಸ್ತಿಯಾಯ್ತು. ದುರ್ನಡತೆಯ ಮಕ್ಕಳ ಬಗ್ಗೆ ಹೆತ್ತವರು ಇಷ್ಟು ನಿಷ್ಠುರವಾಗ್ಬೇಕೂಂತ ನನಗನ್ನಿಸುತ್ತೆ.

ಸಮಯವಿಲ್ಲದಿದ್ರೂ ಸಮಯ ಮಾಡ್ಕೊಂಡು ಓದಿ, ಅದ್ಭುತವಾಗಿದೆ.

- ಮಂಗಳ ಸಿ

10-9-2018

Address

Vidyanagar
Hassan
573202

Alerts

Be the first to know and let us send you an email when Prajodayaprakashana posts news and promotions. Your email address will not be used for any other purpose, and you can unsubscribe at any time.

Contact The Business

Send a message to Prajodayaprakashana:

Shortcuts

Share