Path to Positive parenting

Path to Positive parenting Contact information, map and directions, contact form, opening hours, services, ratings, photos, videos and announcements from Path to Positive parenting, Shopping & retail, Mysore.

ಇಂದು ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜು, ಮೈಸೂರು ಇಲ್ಲಿ "ಕೌಶಲ್ಯ ದರ್ಪಣ" ಕಾರ್ಯಕ್ರಮದಡಿಯಲ್ಲಿ, ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗ...
28/08/2026

ಇಂದು ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜು, ಮೈಸೂರು ಇಲ್ಲಿ "ಕೌಶಲ್ಯ ದರ್ಪಣ" ಕಾರ್ಯಕ್ರಮದಡಿಯಲ್ಲಿ, ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರವನ್ನು ನಡೆಸಲಾಯಿತು.

ಕಾರ್ಯಾಗಾರದಲ್ಲಿ ಪ್ರಥಮ ವರ್ಷದ ಬಿ.ಕಾಂ. ನ A ಮತ್ತು B ತರಗತಿಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎರಡೂ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಒಂದೊಂದು ಗಂಟೆ ಸಮಯದಲ್ಲಿ ಮೂರನೇ ಅವಧಿಯ ತರಬೇತಿಯನ್ನು ನೀಡಲಾಯಿತು.

ವಿದ್ಯಾರ್ಥಿಗಳ ಕಲಿಕಾ ಆಸಕ್ತಿಯು ಇನ್ನೂ ಹೆಚ್ಚು ಹೆಚ್ಚು ವಿಚಾರಗಳನ್ನು ತಿಳಿಸಬೇಕೆನ್ನುವ ಹುಮ್ಮಸ್ಸನ್ನು ನನ್ನಲ್ಲಿ ಮತ್ತಷ್ಟು ಹೆಚ್ಚು ಮಾಡಿತು.

ವಿದ್ಯಾರ್ಥಿಗಳ ಹಾಗೂ ಪ್ರಾಂಶುಪಾಲರ ಕೋರಿಕೆಯ ಮೇರೇಗೆ ಇನ್ನೂ ಕೆಲವು ಅವಧಿಯ ತರಬೇತಿ ಕಾರ್ಯಾಗಾರವನ್ನು ಮುಂದುವರಿಸಲಾಗುವುದು.

"ಕೌಶಲ್ಯ_ದರ್ಪಣ"
"ವ್ಯಕ್ತಿತ್ವ_ವಿಕಸನ"
"ಮೈಸೂರು"

ಇಂದು ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜು, ಮೈಸೂರು ಇಲ್ಲಿ ಮೊದಲನೇ ವರ್ಷದ ಬಿ.ಕಾಂ.ನ ಎ ಮತ್ತು ಬಿ ತರಗತಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕವ...
14/08/2026

ಇಂದು ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜು, ಮೈಸೂರು ಇಲ್ಲಿ ಮೊದಲನೇ ವರ್ಷದ ಬಿ.ಕಾಂ.ನ ಎ ಮತ್ತು ಬಿ ತರಗತಿಯ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಎರಡನೇ ಸುತ್ತಿನ "ಕೌಶಲ್ಯ ದರ್ಪಣ" ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರವನ್ನು ನಡೆಸಲಾಯಿತು.

ತಮ್ಮೊಳಗಿನ ಕೌಶಲ್ಯವನ್ನು ಗುರುತಿಸಿ, ಪೋಷಿಸಿಕೊಳ್ಳುವ ಕುರಿತಂತೆ ಚಟುವಟಿಕೆ ಮಾಡಿಸುವ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು.

ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ಶಿಸ್ತು, ಶ್ರದ್ಧೆ, ಛಲ ಎಷ್ಟು ಮುಖ್ಯ ಎಂಬುದನ್ನು ಅರ್ಥೈಸುವ ಪ್ರಯತ್ನವೂ ಸಹ ಆಯಿತು.

ವಿದ್ಯಾರ್ಥಿಗಳು ಮುಂದಿನ ಜೀವನವನ್ನು ರೂಪಿಸಿಕೊಳ್ಳಲು ಅವಶ್ಯವೆನಿಸುವ ಕುರಿತಂತೆ ತಮ್ಮಲ್ಲಿದ್ದ ಸಂಶಯ, ಗೊಂದಲಗಳ ಕುರಿತಂತೆ ಹಲವಾರು ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಉತ್ಸಾಹವನ್ನು ತೋರಿಸುತ್ತಿದ್ದುದು ಸಾರ್ಥಕತೆಯನ್ನು ಮೂಡಿಸಿತು.

Ramakrishna Institute of Moral and Spiritual Education (RIMSE), ಮೈಸೂರು ವತಿಯಿಂದ ಸೇವಾ ಭಾರತಿ ಪಬ್ಲಿಕ್ ಸ್ಕೂಲ್, ಚಾಮರಾಜನಗರ ಈ ಶಾ...
09/08/2026

Ramakrishna Institute of Moral and Spiritual Education (RIMSE), ಮೈಸೂರು ವತಿಯಿಂದ ಸೇವಾ ಭಾರತಿ ಪಬ್ಲಿಕ್ ಸ್ಕೂಲ್, ಚಾಮರಾಜನಗರ ಈ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳಿಗೆ "ಕೌಶಲ್ಯ ದರ್ಪಣ‌" ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು. 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಿದ್ದರು. ಕೆಲವು ಚಟುವಟಿಕೆ‌ ಮಾಡಿಸುವ ಮೂಲಕ ವಿದ್ಯಾರ್ಥಿಗಳು ಹೊಂದಿರಬೇಕಾದ ಜವಾಬ್ದಾರಿ, ಕಲಿಕೆಯ ಕಡೆ ನೀಡಬೇಕಾದ ಗಮನದ ಕುರಿತು ತಿಳಿಸಿಕೊಡಲಾಯಿತು. ಇಂದಿನಿಂದಲೇ ನಿಮ್ಮ ಆಸಕ್ತಿ ವಿಷಯದ ಕಡೆಗೆ ಹೆಚ್ಚು ಗಮನ ನೀಡುವುದರಿಂದ ನಿಮ್ಮ ಕೌಶಲ್ಯವನ್ನು ಗುರುತಿಸಿಕೊಂಡು, ಒಂದು ಗುರಿಯನ್ನು ಹೊಂದುವುದು ಹೇಗೆಂದು ವಿವರಣೆ ನೀಡಲಾಯಿತು. ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಭಾಗವಹಿಸಿ, ತಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
#ಕೌಶಲ್ಯದರ್ಪಣ #
#ವ್ಯಕ್ತತ್ವವಿಕಸನ #
#ಮೈಸೂರು #

ಇಂದು ಮೈಸೂರಿನ ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜಿನಲ್ಲಿ "ಕೌಶಲ್ಯ ದರ್ಪಣ" ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು. ಪ್ರ...
05/08/2026

ಇಂದು ಮೈಸೂರಿನ ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜಿನಲ್ಲಿ "ಕೌಶಲ್ಯ ದರ್ಪಣ" ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ನಡೆಸಿಕೊಡಲಾಯಿತು.

ಪ್ರಥಮ ಬಿ.ಕಾಂ ನ A & B ಯ ಎರಡು ಪ್ರತ್ಯೇಕ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶೈಕ್ಷಣಿಕ ವ್ಯಾಸಂಗದ ಜೊತೆ ಜೊತೆಗೆ ಹವ್ಯಾಸವನ್ನು ರೂಢಿಸಿಕೊಳಬೇಕು, ವಿದ್ಯಾರ್ಥಿ ಜೀವನದೊಂದಿಗೇ ಗುರಿಯನ್ನು ಹೊಂದಬೇಕು. ಗುರಿಯನ್ನು ಸಾಧಿಸುವ ಸಾಮರ್ಥ್ಯ ನಿಮ್ಮೊಳಗೇ ಇದ್ದು, ಅದನ್ನು ಹೇಗೆ ಕಂಡುಕೊಂಡು ಯಶಸ್ಸಿನೆಡೆಗೆ ಸಾಗಬಹುದಾದ ಮಾರ್ಗಗಳೇನು ಎಂಬುದರ ಕುರಿತಂತೆ ತಿಳಿಸಲಾಯಿತು.

ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಭಾಗವಹಿಸಿದ್ದು, ಅವರ ಕೌಶಲ್ಯವನ್ನು ಹೊರತರುವ ಪ್ರಯತ್ನ ಮಾಡಿದಲ್ಲಿ ಪ್ರತಿ ವಿದ್ಯಾರ್ಥಿಯೂ ದೇಶದ ಉತ್ತಮ ಪ್ರಜೆಯಾಗುವುದರಲ್ಲಿ ಯಾವ ಸಂದೇಹವೂ ಇಲ್ಲ. ಸರಿಯಾದ ದಾರಿ ತೋರಿಸಬೇಕಷ್ಟೇ.

#ಕೌಶಲ್ಯದರ್ಪಣ #
#ವ್ಯಕ್ತಿತ್ವವಿಕಸನ #
#ಮೈಸೂರು #

ಈ ದಿನ ವಿದ್ಯಾವರ್ಧಕ ಪದವಿಪೂರ್ವ ಕಾಲೇಜು, ಮೈಸೂರು ಇಲ್ಲಿನ ಪಿಯು ವಿದ್ಯಾರ್ಥಿಗಳಿಗೆ ಕಥೆ ಹೇಳುವ ಮೂಲಕ ಚಟುವಟಿಕೆ ಮಾಡಿಸಲಾಯಿತು.  ಹೇಗೆ ಏಕಾಗ್ರ...
13/07/2026

ಈ ದಿನ ವಿದ್ಯಾವರ್ಧಕ ಪದವಿಪೂರ್ವ ಕಾಲೇಜು, ಮೈಸೂರು ಇಲ್ಲಿನ ಪಿಯು ವಿದ್ಯಾರ್ಥಿಗಳಿಗೆ ಕಥೆ ಹೇಳುವ ಮೂಲಕ ಚಟುವಟಿಕೆ ಮಾಡಿಸಲಾಯಿತು. ಹೇಗೆ ಏಕಾಗ್ರತೆಯನ್ನು ಹೊಂದುವುದು, ವಿದ್ಯಾರ್ಥಿ ಜೀವನದಲ್ಲಿ ಬರುವ ಸಾಕಷ್ಟು ಪ್ರಶ್ನೆ, ಗೊಂದಲ, ಸಮಸ್ಯೆಗಳಿಗೆ ಹಲವಾರು ಬಗೆಯಲ್ಲಿ ಹೇಗೆ ಉತ್ತರ ಕಂಡುಕೊಳ್ಳುವುದು ಎನ್ನುವ ಕುರಿತಂತೆ ವಿದ್ಯಾರ್ಥಿಗಳಿಂದಲೇ ಉತ್ತರ ಪಡೆಯಲಾಯಿತು. ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದರು.

22/06/2026

ಮಕ್ಕಳು ನಮಗಷ್ಟೇ ಆಧಾರ ಸ್ತಂಭ ಅಲ್ಲ. ಅವರು ಸಮಾಜ ಹಾಗೂ ದೇಶಕ್ಕೂ ಆಧಾರಸ್ತಂಭವಾಗಬೇಕು.

ಅನನ್ಯ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್, ತುಮಕೂರುಅಕ್ಟೋಬರ್ 2025
17/06/2026

ಅನನ್ಯ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್, ತುಮಕೂರು
ಅಕ್ಟೋಬರ್ 2025

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಕರಿಕಲ್ ದೊಡ್ಡಿ, ಹಾರೋಹಳ್ಳಿ, ಕನಕಪುರಜುಲೈ 2024
17/06/2026

ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಕರಿಕಲ್ ದೊಡ್ಡಿ, ಹಾರೋಹಳ್ಳಿ, ಕನಕಪುರ
ಜುಲೈ 2024

ಜನತಾ ಇಂಡಿಪೆಂಡೆಂಟ್ ಪಿ ಯು ಕಾಲೇಜು, ಹೆಮ್ಮಾಡಿ, ಉಡುಪಿಜುಲೈ 2024
17/06/2026

ಜನತಾ ಇಂಡಿಪೆಂಡೆಂಟ್ ಪಿ ಯು ಕಾಲೇಜು, ಹೆಮ್ಮಾಡಿ, ಉಡುಪಿ
ಜುಲೈ 2024

Address

Mysore

Website

Alerts

Be the first to know and let us send you an email when Path to Positive parenting posts news and promotions. Your email address will not be used for any other purpose, and you can unsubscribe at any time.

Shortcuts

Share