05/04/2020
*ಕೊರೋನ ಮಹಾಮಾರಿ ರೋಗದ ಬಗ್ಗೆ ಯಕ್ಷಾಗಾನಾಭಿಮಾನಿಗಳಲ್ಲಿ ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ ದಿನೇಶ ಉಪ್ಪೂರರು ರಚಿಸಿರುವ ಸಾಹಿತ್ಯ*
ಸಾಂಗತ್ಯ
ಏನಾಗುತಿದೆಯೋ ಕೊ |ರೋನಾ ಎಂಬಂತ ವೈ|
ರಾಣು ವ್ಯಾಪಿಸಿ ಇಂದು ಜಗದ|
ಮಾನವ ಕುಲವ ನಿ| ರ್ನಾಮಗೈಯುತಲಿ ವಿ|
ಜ್ಞಾನಿಗಳಿಗೆ ಸವಾಲಾಯ್ತು|
ಮದ್ದಿಲ್ಲವದಕೆ ಸೋಂ | ಕಿದ್ದವರನು ಮುಟ್ಟೆ|
ಸುದ್ದಿಯಿಲ್ಲದೆ ಹರಡುವುದು|
ತದ್ದಿನ ಜ್ವರವೇರು| ತಿದ್ದು ಉಬ್ಬಸ ದಿಂದ|
ಬಿದ್ದು ಸಾಯುವರಂತೆ ಜನರು|
ಗೊತ್ತುಗುರಿ ಇರದೇ ತಿರು| ಗುತ್ತಲಿರದೆ ಪುರ |
ಸೊತ್ತಲಿ ಮನೆಯೊಳಗಿದ್ದು|
ಹೊತ್ತು ಕಳೆಯುತಲಿರಿ |ನಿತ್ಯ ಹಿರಿಯರ ಸೇವಿ|
ಸುತ್ತಲಿ ಸತಿಸುತರೊಡನೆ|
ಉಪ್ಪೂರ
*ಇದನ್ನ ಈಗಿನ ಭಾಗವತರಲ್ಲಿ ಹಾಡಿಸಿ ಸೋಶಿಯಲ್ ಮೀಡಿಯಗಳಲ್ಲಿ ಶೇರ್ ಮಾಡಿ ಯಕ್ಷಾಭಿಮಾನಿಗಳಲ್ಲಿ ಜಾಗೃತಿ ಮೂಡಿಸುವ ಒಂದು ಸಣ್ಣ ಪ್ರಯತ್ನ*
ಇಲ್ಲಿ ಹಾಡಿರುವ ಭಾಗವತರು - ಪ್ರಸ್ತುತ ಬಡಗುತಿಟ್ಟಿನ ಬೇಡಿ
ಕೆಯ ಹಾಗೂ ಪೆರಡೂರು ಮೇಳದ ಪ್ರಧಾನ ಭಾಗವತರಾದ
*ರಾಘವೇಂದ್ರ ಆಚಾರ್ ಜನ್ಸಾಲೆ*
ರಾಗ - *ರೇವತಿ, ಚಂದ್ರಕಂಸ್, ವಾಸಂತಿ*
# *Share_It*